ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಸತೀಶ್ ಜಾರಕಿಹೊಳಿ ನಿವಾಸದ ‘ಡಿನ್ನರ್ ಮೀಟಿಂಗ್’ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಒಟ್ಟಿಗೆ ಕುಳಿತು ಊಟ ಮಾಡುವುದರಲ್ಲಿ ತಪ್ಪೇನಿದೆ? ನಾವೇನು ಹೊರಗಿನಿಂದ ಬಂದಿದ್ದೇವಾ?” ಎಂದು ಪ್ರಶ್ನಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿನ್ನರ್ ಮೀಟಿಂಗ್‌ನಲ್ಲಿ ಕೆಲವೇ ನಾಯಕರು ಭಾಗವಹಿಸಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ, “ಅದೆಲ್ಲಾ ನನಗೆ ಅನಗತ್ಯ, ನನ್ನನ್ನು ಯಾಕೆ ಈ ಬಗ್ಗೆ ಕೇಳುತ್ತೀರಿ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ‘ಎಟಿಎಂ ಸರ್ಕಾರ’ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, “ನಾವು ಹೈಕಮಾಂಡ್‌ಗೆ ಎಟಿಎಂ ಎಂದು ಆರೋಪಿಸುತ್ತಿರುವವರು ಅದನ್ನು ಸಾಬೀತುಪಡಿಸಲಿ. ಯಾವ ಆಧಾರದ ಮೇಲೆ ಈ ರೀತಿ ಮಾತನಾಡುತ್ತಿದ್ದಾರೆ? ಅವರ ಆರೋಪಗಳಿಗೆ ಕಾಲವೇ ಉತ್ತರ ನೀಡಲಿದೆ,” ಎಂದು ಎಚ್ಚರಿಸಿದರು.

