ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಪ್ರವಾಹದಿಂದ ತತ್ತರಿಸಿದ ಹಿಮಾಚಲ ಪ್ರದೇಶದ ಮನಾಲಿಗೆ ಸಂಸದೆ ಕಂಗನಾ ರಣಾವತ್ ಭೇಟಿ ನೀಡಿದ್ದು, ಈ ವೇಳೆ ಜನರು ತಮ್ಮ ಕಷ್ಟಗಳನ್ನು ಮುಂದಿಟ್ಟಿದ್ದು, . ಆದ್ರೆ ಈ ವೇಳೆ ಕಂಗನಾ ಜನರ ಬಳಿ ತಮ್ಮ ಸಂಕಷ್ಟವನ್ನು ಹೇಳಿಕೊಂಡ ಘಟನೆ ನಡೆದಿದೆ.
ಸ್ಥಳೀಯರೊಂದಿಗೆ ಮಾತನಾಡಿದ ಅವರು, ನನ್ನ ಮನೆ ಮನಾಲಿಯಲ್ಲಿದೆ, ಮತ್ತು ನನ್ನ ರೆಸ್ಟೋರೆಂಟ್ ಕೂಡ ಇಲ್ಲಿಯೇ ಇದೆ. ನಿನ್ನೆ ನನ್ನ ರೆಸ್ಟೋರೆಂಟ್ ಕೇವಲ 50 ರೂ. ವ್ಯವಹಾರ ನಡೆಸಿದೆ. ಆದರೆ ನಾನು ಮಾಸಿಕ 15 ಲಕ್ಷ ರೂ. ಸಂಬಳವನ್ನು ಪಾವತಿಸಬೇಕಾಗಿದೆ. ನಾನು ಏನನ್ನು ಎದುರಿಸುತ್ತಿರಬಹುದು ಎಂದು ಊಹಿಸಿ. ನಾನು ಒಂಟಿ ಮಹಿಳೆ’ ಎಂದು ಕಂಗನಾ ಬೇಸರ ವ್ಯಕ್ತಪಡಿಸಿದರು.
ನಾನು ಸಮಾಜದಲ್ಲಿ ಒಂಟಿ ಮಹಿಳೆಯಾಗಿ ಬದುಕುತ್ತಿದ್ದೇನೆ. ದಯವಿಟ್ಟು ನನ್ನ ಕಷ್ಟವನ್ನೂ ಅರ್ಥಮಾಡಿಕೊಳ್ಳಿ. ನನ್ನನ್ನು ಇಂಗ್ಲೆಂಡ್ ರಾಣಿ ಎಂದು ಭಾವಿಸಬೇಡಿ. ನಾನು ನನ್ನ ಸ್ವಂತ ಶ್ರಮದಿಂದ ಸಂಪಾದಿಸಿ ಬದುಕುವ ಮಹಿಳೆ ಎಂದು ಅವರು ಹೇಳಿದ್ದಾರೆ.
ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಮತ್ತು ಸ್ಥಳೀಯ ಅಧಿಕಾರಿಗಳು ಆ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಸಂಸದೆ ಹೇಳಿದ್ದಾರೆ.