ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ತಾಲೂಕಿನ ಲಿಂಗಾಪುರ ಗ್ರಾಮದ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಅವರ ಪೋಷಕರು ತಮ್ಮ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸುವ ಮೂಲಕ ವಿಭಿನ್ನ ಅನುಭವ ನೀಡಿದ್ದಾರೆ.
ಲಿಂಗಾಪುರ ಗ್ರಾಮ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿನ ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಒಟ್ಟು 36 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಆರನೇ ತರಗತಿ ಮತ್ತು 7ನೇ ತರಗತಿಯ ಒಟ್ಟು 10 ವಿದ್ಯಾರ್ಥಿಗಳು ವಿಮಾನಯಾನದ ಪ್ರವಾಸ ಮಾಡಿದ್ದಾರೆ.
ನಾವು ಮೂರು ದಿನ ಶೈಕ್ಷಣಿಕ ಪ್ರವಾಸ ಮಾಡಿದ್ದೆವು. ನಮ್ಮ ಶೈಕ್ಷಣಿಕ ಪ್ರವಾಸ ವಿಮಾನದ ಮೂಲಕ ಮಾಡಿರುವುದು ನಮಗೆ ತುಂಬಾ ಖುಷಿ ತಂದಿದೆ. ನಮ್ಮ ಕುಟುಂಬದಲ್ಲಿ ನಾನೇ ಮೊದಲ ವಿಮಾನಯಾನ ಮಾಡಿದವಳು ಎಂದು ಹೇಳಲು ಇನ್ನೂ ಖುಷಿ ಆಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ಖುಷಿ ಹಂಚಿಕೊಂಡಿದ್ದಾರೆ.

