ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು, ಬಸ್‌ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ರಾಯಚೂರು ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ.
ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಸ್ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ಓರ್ವ ಪ್ರಯಾಣಿಕನ ಕಾಲು ಮುರಿದಿದ್ದು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಟಿ ಜಿಟಿ ಮಳೆಯಲ್ಲೇ ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದ್ದು, ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.