Wednesday, December 10, 2025

CINE | OTTಗೆ ಬರ್ತಿದೆ ದುಲ್ಕರ್–ರಾಣಾ ಅಭಿನಯದ ‘ಕಾಂತ’: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಅಂತೆ! ಆದ್ರೆ ಯಾವಾಗಿಂದ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ತೆಲುಗು ನಟ ರಾಣಾ ದಗ್ಗುಬಾಟಿ ಅಭಿನಯದ ‘ಕಾಂತ’ ಸಿನಿಮಾ ಇದೀಗ ಡಿಜಿಟಲ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ OTT ದಿನಾಂಕ ಲಾಕ್ ಮಾಡಿರುವ ಈ ಸಿನಿಮಾ, ಡಿಸೆಂಬರ್ 12ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

1950ರ ದಶಕದ ಹಿನ್ನೆಲೆಯೊಂದಿಗೆ ಮೂಡಿಬಂದಿರುವ ಈ ಚಿತ್ರವನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದು, ಸಮುದ್ರಖನಿ ಹಾಗೂ ಭಾಗ್ಯಶ್ರೀ ಬೋರ್ಸೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 14ರಂದು ಚಿತ್ರಮಂದಿರಗಳಿಗೆ ಬಂದಿದ್ದ ‘ಕಾಂತ’, ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ ತೆಲುಗು ಹಾಗೂ ತಮಿಳು ಆವೃತ್ತಿಗಳು ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ.

ಸಿನಿಮಾದ ಕಥೆಯಲ್ಲಿ ಖ್ಯಾತ ನಿರ್ದೇಶಕ ಅಯ್ಯ ಮತ್ತು ತನ್ನ ಶಿಷ್ಯ ನಟ ಟಿ.ಕೆ. ಮಹಾದೇವನ್ ನಡುವಿನ ಸಂಘರ್ಷವಾಗಿದೆ. ಚಿತ್ರರಂಗದ ಒಳಜಗತ್ತಿನ ಅಹಂಕಾರ, ಸಂಬಂಧಗಳು ಹಾಗೂ ಪ್ರೀತಿ–ವಿರೋಧಗಳ ಮಿಶ್ರಣವನ್ನು ಕಥೆ ಒಳಗೊಂಡಿದೆ. ಮಹಾದೇವನ್ ಮತ್ತು ಕುಮಾರಿ ನಡುವಿನ ಪ್ರೇಮ, ಅದರ ಸುತ್ತ ಬೆಳೆಯುವ ರಹಸ್ಯಗಳು ಕಥೆಗೆ ತೀವ್ರ ತಿರುವು ನೀಡುತ್ತವೆ.

error: Content is protected !!