Wednesday, September 17, 2025

ದಸರಾ ಸಂಭ್ರಮ: ಯುವ ದಸರಾ ಟಿಕೆಟ್ ಮಾರಾಟ ಶುರು, ದರ ಎಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೈಸೂರು ದಸರಾ ಯುವ ದಸರಾ ಕಾರ್ಯಕ್ರಮವು ಸೆಪ್ಟೆಂಬರ್ 23-27 ರಂದು ಉತ್ತನಹಳ್ಳಿಯಲ್ಲಿ ನಡೆಯಲಿದೆ. ಇದಕ್ಕಾಗಿ ಟಿಕೆಟ್‌ ಮಾರಾಟ ಆರಂಭವಾಗಿದೆ. ಟಿಕೆಟ್ ದರ ಎಷ್ಟಿದೆ? ಇಲ್ಲಿದೆ ಡೀಟೇಲ್ಸ್‌..

ಈ ಬಾರಿ ಯುವ ದಸರಾಕ್ಕೆ ಐದು ಸಾವಿರ ಹಾಗೂ 2,500 ಗಳ ಟಿಕೆಟ್ ದರವನ್ನ ನಿಗದಿ ಮಾಡಲಾಗಿದೆ. ಸಾರ್ವಜನಿಕರು ಎಷ್ಟು ಟಿಕೆಟ್ ಗಳನಾದರೂ ಖರೀದಿಸಬಹುದು. ಟಿಕೆಟ್ ಹೊಂದಿರುವವರಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಬ್ಬರಿಗೆ ಇಂತಿಷ್ಟೇ ಟಿಕೆಟ್ ಎಂಬ ಮಿತಿ ಇರುವುದಿಲ್ಲ. ಟಿಕೆಟ್ ಇಲ್ಲದೆಯೂ ಉಚಿತವಾಗಿ ಕಾರ್ಯಕ್ರಮವನ್ನು ವೀಕ್ಷಿಸುವ ವ್ಯವಸ್ಥೆ ಕೂಡ ಇರುತ್ತದೆ.

ಕಳೆದ ವರ್ಷ ಯುವದಸರಾಗೆ ಎಂಟು ಸಾವಿರ, 5,000 ಹಾಗೂ 2,500 ಟಿಕೆಟ್ ದರವನ್ನು ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ಯುವ ದಸರಾ ಉಪ ಸಮಿತಿಯು ಟಿಕೆಟ್ ದರವನ್ನು ಕಡಿಮೆ ಮಾಡಿದೆ.

ಇದನ್ನೂ ಓದಿ