ಕೆರೆಯಲ್ಲಿ ಬಿದ್ದು ವೃದ್ಧ ಸಾ*ವು: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೊಸದಿಗಂತ ವರದಿ ಉತ್ತರಕನ್ನಡ: ಮುಂಡಗೋಡ ತಾಲೂಕಿನ ಸಾಲಗಾಂವ ಕೆರೆಯ ನೀರಿನಲ್ಲಿ ಬಿದ್ದು ವೃದ್ಧನೊಬ್ಬ ಮೃತಪಟ್ಟಿರುವ ಬಗ್ಗೆ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಜೊಗೇಶ್ವರಹಳ್ಳದ ಮುರಗಯ್ಯ ಹಿರೇಮಠ(೬೩)ಮೃತಪಟ್ಟ ವೃದ್ಧ. ಜು4ರಂದು ರಾತ್ರಿ 9 ಗಂಟೆಗೆ ಮನೆಯ ಹಿತ್ತಲಿನಲ್ಲಿ ಮಲಗಿಕೊಂಡವರು ಜು.೫ರಂದು ಸಂಜೆ ಸಾಲಗಾಂವ ಗ್ರಾಮದ ಸಾಲಗಾಂವ ಕೆರೆಯ ದಂಡೆಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತನ ಪುತ್ರ ನಾಗರಾಜ ದೂರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
Copy and paste this URL into your WordPress site to embed
Copy and paste this code into your site to embed