September 20, 2026
Sunday, September 20, 2026
spot_img

ಕೆರೆಯಲ್ಲಿ ಬಿದ್ದು ವೃದ್ಧ ಸಾ*ವು: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹೊಸದಿಗಂತ ವರದಿ ಉತ್ತರಕನ್ನಡ:

ಮುಂಡಗೋಡ ತಾಲೂಕಿನ ಸಾಲಗಾಂವ ಕೆರೆಯ ನೀರಿನಲ್ಲಿ ಬಿದ್ದು ವೃದ್ಧನೊಬ್ಬ ಮೃತಪಟ್ಟಿರುವ ಬಗ್ಗೆ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಜೊಗೇಶ್ವರಹಳ್ಳದ ಮುರಗಯ್ಯ ಹಿರೇಮಠ(೬೩)ಮೃತಪಟ್ಟ ವೃದ್ಧ.

ಜು4ರಂದು ರಾತ್ರಿ 9 ಗಂಟೆಗೆ ಮನೆಯ ಹಿತ್ತಲಿನಲ್ಲಿ ಮಲಗಿಕೊಂಡವರು ಜು.೫ರಂದು ಸಂಜೆ ಸಾಲಗಾಂವ ಗ್ರಾಮದ ಸಾಲಗಾಂವ ಕೆರೆಯ ದಂಡೆಯ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು, ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತನ ಪುತ್ರ ನಾಗರಾಜ ದೂರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !