ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಮಹಿಳಾ ಪೊಲೀಸರ ತಂಡ ದೇಶದಲ್ಲೇ ಮೊದಲ ಎನ್‌ಕೌಂಟರ್ ನಡೆಸಿದೆ. ಈ ಮೂಲಕ ಕ್ರಿಮಿನಲ್‌ನ ಬಂಧಿಸಿದ ಘಟನೆ ನಡೆದಿದೆ.
ಯುಪಿಯ ಘಾಝಿಯಾಬಾದ್‌ನಲ್ಲಿ ಮಹಿಳಾ ಪೊಲೀಸರ ತಂಡ ಎನ್‌ಕೌಂಟರ್ ನಡೆಸಿದೆ. ಚೆಕ್ ಪಾಯಿಂಟ್‌ನಲ್ಲಿದ್ದ ಮಹಿಳಾ ಪೊಲೀಸರಿಗೆ ಇದೇ ಚೆಕ್ ಪಾಯಿಂಟ್ ಮೂಲಕ ಕ್ರಿಮಿನಲ್ ಜಿತೇಂದ್ರ ಸಾಗುತ್ತಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಹಿಳಾ ಪೊಲೀಸರ ತಂಡ ಜಿತೇಂದ್ರನ ಹಿಡಿಯಲು ಸಜ್ಜಾಗಿದ್ದರು. ಚೆಕ್ ಪೋಸ್ಟ್ ಬಳಿ ಜಿತೇಂದ್ರ ಸ್ಕೂಟರ್ ಮೂಲಕ ಬರುತ್ತಿದ್ದಂತೆ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಜಿತೇಂದ್ರ ಸ್ಕೂಟರ್ ನಿಲ್ಲಿಸದೆ ತೆರಳುವ ಪ್ರಯತ್ನ ಮಾಡಿದ್ದಾನೆ. ಬ್ಯಾರಿಕೇಡ್ ಹಾಕುತ್ತಿದ್ದಂತೆ ಸ್ಕೂಟರ್‌ಗೆ ಬಡಿದಿದೆ. ಇತ್ತ ನಿಯಂತ್ರಣ ಕಳೆದುಕೊಂಡ ಕ್ರಿಮಿನಲ್ ಜಿತೇಂದ್ರ ನೆಲಕ್ಕೆ ಬಿದ್ದಿದ್ದಾನೆ.
ಆದರೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೆನ್ನಲ್ಲೇ ಪೊಲೀಸರು ಶರಣಾಗಲು ಸೂಚಿಸಿದ್ದಾರೆ. ಶರಣಾದರೆ ಒಳಿತು, ಆದರೆ ಆರಂಭದಲ್ಲಿ ತೀವ್ರವಾಗಿ ಗಾಯಗೊಂಡಂತೆ ನಟಿಸಿದ ಕ್ರಿಮಿನಲ್ ಜಿತೇಂದ್ರ, ಕೆಲ ಹೊತ್ತು ರಸ್ತೆಯಲ್ಲೇ ಮಲಗಿದ್ದಾನೆ. ಪೊಲೀಸರು ಸುತ್ತುವರಿಯಲು ಹೋಗುತ್ತಿದ್ದಂತೆ ಗುಂಡಿನ ದಾಳಿಗೆ ಮುಂದಾಗಿದ್ದಾನೆ.
ಮೊದಲೆ ಎಲ್ಲಾ ಪರಿಸ್ಥಿತಿಗೂ ಸಜ್ಜಾಗಿದ್ದ ಮಹಿಳಾ ಪೊಲೀಸರು ತಕ್ಷಣವೇ ಪ್ರತಿದಾಳಿ ನಡೆಸಿದ್ದಾರೆ. ನೆಲಕ್ಕೆ ಬಿದ್ದ ಬೆನ್ನಲ್ಲೇ ರಿವಾಲ್ವರ್ ತೆಗೆದು ದಾಳಿ ಆರಂಭಿಸಿದ ಜಿತೇಂದ್ರನ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಜಿತೇಂದ್ರನ ಮೊಣಕಾಲಿನ ಕೆಳಗೆ ಗುಂಡಿನ ದಾಳಿ ನಡೆಸಿದ್ದಾರೆ. ಎರಡೂ ಕಾಲಿಗೆ ಗುಂಡಿನ ಮಳೆ ಸುರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಜಿತೇಂದ್ರನಿ ಕುಸಿದು ಬಿದ್ದಿದ್ದಾನೆ. ಬಳಿಕ ಮಹಿಳಾ ಪೊಲೀಸರ ತಂಡ, ಜಿತೇಂದ್ರನಿಂದ ರಿವಾಲ್ವರ್ ಕಸಿದು, ಬಂಧಿಸಿದ್ದಾರೆ.