Saturday, September 13, 2025

ಛತ್ತೀಸ್‌ಗಢದ ಬಿಜಾಪುರದಲ್ಲಿ ಎನ್‌ಕೌಂಟರ್‌: ಇಬ್ಬರು ನಕ್ಸಲರ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಬಿಜಾಪುರದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರನ್ನು ಹತ್ಯೆ ಮಾಡಲಾಗಿದೆ.

ಈ ಇಬ್ಬರಿಗೆ 16 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಮೃತ ಇಬ್ಬರು ನಕ್ಸಲರು ಹಿದ್ಮಾ ಪೊಡಿಯಮ್, 34, ಮತ್ತು ಮುನ್ನಾ ಮಡ್ಕಮ್, 25, ನಿಷೇಧಿತ ಸಿಪಿಐ ನ ಮಿಲಿಟರಿ ಪ್ಲಟೂನ್ ಸಂಖ್ಯೆ 1 ರ ಸದಸ್ಯರಾಗಿದ್ದರು. ಸ್ಥಳದಲ್ಲಿದ್ದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್, ಬಿಜಾಪುರದ ಅರಣ್ಯ ನೈಋತ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಗಾರ್ಡ್ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಎನ್‌ಕೌಂಟರ್ ಸ್ಥಳದಿಂದ ಭದ್ರತಾ ಪಡೆಗಳು 303 ರೈಫಲ್, 12 ಬೋರ್ ಗನ್, ಎಂಟು ಸುತ್ತುಗಳು, ಬ್ಯಾಟರಿಗಳು, ಕಾರ್ಡೆಕ್ಸ್ ವೈರ್, ಸ್ಕ್ಯಾನರ್ ಸೆಟ್, ಮಾವೋವಾದಿ ಸಾಹಿತ್ಯ ಮತ್ತು ಇತರ ಹಲವು ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜದೇರಾ- ಮಾಟಲ್ ಬೆಟ್ಟಗಳಲ್ಲಿ ಗುರುವಾರ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ನಿಷೇಧಿತ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ (ಸಿಸಿಎಂ) ಮೋಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಮತ್ತು ಇತರ ಒಂಬತ್ತು ಕಾರ್ಯಕರ್ತರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಈ ವರ್ಷದ ಆರಂಭದಿಂದ ಈವರೆಗೆ ಛತ್ತೀಸ್‌ಗಢದಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 243 ನಕ್ಸಲರನ್ನು ಕೊಲ್ಲಲಾಗಿದೆ.

ಇದನ್ನೂ ಓದಿ