Monday, November 10, 2025

ಎಂಗೇಜ್ಮೆಂಟ್ ಮಾಡ್ಕೊಂಡ ಬಿಗ್​ಬಾಸ್ ಮಾಜಿ ಸ್ಪರ್ಧಿ: ಉಗ್ರಂ ಮಂಜು ಬದುಕಿನ ಹೊಸ ಅಧ್ಯಾಯ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

“ಹುಡುಗಿ ಹುಡುಕುತ್ತಿದ್ದೇನೆ, ಸಿಕ್ಕಮೇಲೆ ಮದುವೆ ಆಗ್ತೀನಿ” ಎಂದು ಕೆಲವು ತಿಂಗಳ ಹಿಂದೆ ಹೇಳಿದ್ದ ಉಗ್ರಂ ಮಂಜು ಅವರ ಮಾತು ಈಗ ನಿಜವಾಗಿದೆ. ಹುಡುಗಿ ಸಿಕ್ಕಿದ್ದು, ಈಗ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಮಂಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಉಗ್ರಂ ಮಂಜು ಅವರು ಇನ್‌ಸ್ಟಾಗ್ರಾಂನಲ್ಲಿ “ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ… ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ” ಎಂದು ಬರೆದು, ನಿಶ್ಚಿತಾರ್ಥದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಇದೀಗ ಎಲ್ಲರಿಗೂ ಕುತೂಹಲದ ವಿಷಯವೇನೆಂದರೆ ಮಂಜು ಅವರ ಜೀವನ ಸಂಗಾತಿ ಯಾರು? ಅವರು ಸಂಧ್ಯಾ ಖುಷಿ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಧ್ಯಾ ಅವರ ಇನ್‌ಸ್ಟಾಗ್ರಾಂ ಬಯೋ ಪ್ರಕಾರ ಅವರು transplant coordinator ಆಗಿದ್ದು, ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ.

error: Content is protected !!