ತಮಿಳುನಾಡಿನಲ್ಲಿ ‘ಅಧಿಕಾರಕ್ಕೆ ಕಸರತ್ತು’: ಎಡಪಕ್ಷಗಳ ಬೆಂಬಲ ಕೋರಿದ ‘ದಳಪತಿ’

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ವಿಜಯ್ ನೇತೃತ್ವದ ಟಿವಿಕೆ, ಈಗ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಒಗ್ಗೂಡಿಸುವ ಪ್ರಯತ್ನದಲ್ಲಿ ತೊಡಗಿದೆ. ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಮೈತ್ರಿ ರಾಜಕಾರಣಕ್ಕೆ ಹೊಸ ತಿರುವು ಸಿಕ್ಕಿದೆ. ಈಗಾಗಲೇ ಕಾಂಗ್ರೆಸ್ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ಟಿವಿಕೆ, ಉಳಿದ ಸಂಖ್ಯಾಬಲಕ್ಕಾಗಿ ಎಡಪಕ್ಷಗಳತ್ತ ಮುಖ ಮಾಡಿದೆ. ಪಕ್ಷದ ಹಿರಿಯ ನಾಯಕರು ಕಮ್ಯುನಿಸ್ಟ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದು, ಸರ್ಕಾರ ರಚನೆಗೆ ಸಹಕಾರ ನೀಡುವಂತೆ … Continue reading ತಮಿಳುನಾಡಿನಲ್ಲಿ ‘ಅಧಿಕಾರಕ್ಕೆ ಕಸರತ್ತು’: ಎಡಪಕ್ಷಗಳ ಬೆಂಬಲ ಕೋರಿದ ‘ದಳಪತಿ’