ಬೈರಮಂಗಲದಲ್ಲಿ ಕಾವೇರಿದ ರೈತರ ಪ್ರತಿಭಟನೆ: ರಸ್ತೆ ಮಧ್ಯೆಯೇ ಉಪವಾಸ ಸತ್ಯಾಗ್ರಹ, ಹೋರಾಟ ಮತ್ತಷ್ಟು ತೀವ್ರ

ಹೊಸದಿಗಂತ ವರದಿ ರಾಮನಗರ: ಸಮಗ್ರ ಉಪನಗರ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಬೈರಮಂಗಲ ಗ್ರಾಮದ ಮುಖ್ಯರಸ್ತೆ ಮಧ್ಯೆಯೇ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಉಪವಾಸ ನಿರತ ರೈತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರೆ ಮತ್ತೆ 10 ಮಂದಿ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಐವರು ಪುರುಷರು ಹಾಗೂ ಐವರು ಮಹಿಳೆಯರು ಉಪವಾಸದಲ್ಲಿ ಪಾಲ್ಗೊಂಡಿದ್ದಾರೆ. ಮಂಗಳವಾರ ಮೂವರು ರೈತರು ಉಪವಾಸ ಇದ್ದು ಅಸ್ವಸ್ಥ ಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು. … Continue reading ಬೈರಮಂಗಲದಲ್ಲಿ ಕಾವೇರಿದ ರೈತರ ಪ್ರತಿಭಟನೆ: ರಸ್ತೆ ಮಧ್ಯೆಯೇ ಉಪವಾಸ ಸತ್ಯಾಗ್ರಹ, ಹೋರಾಟ ಮತ್ತಷ್ಟು ತೀವ್ರ