ಹೊಸದಿಗಂತ ವರದಿ ರಾಮನಗರ:
ಸಮಗ್ರ ಉಪನಗರ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಬೈರಮಂಗಲ ಗ್ರಾಮದ ಮುಖ್ಯರಸ್ತೆ ಮಧ್ಯೆಯೇ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಹೋರಾಟ ಮತ್ತಷ್ಟು ತೀವ್ರಗೊಂಡಿದೆ.
ಉಪವಾಸ ನಿರತ ರೈತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರೆ ಮತ್ತೆ 10 ಮಂದಿ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಐವರು ಪುರುಷರು ಹಾಗೂ ಐವರು ಮಹಿಳೆಯರು ಉಪವಾಸದಲ್ಲಿ ಪಾಲ್ಗೊಂಡಿದ್ದಾರೆ. ಮಂಗಳವಾರ ಮೂವರು ರೈತರು ಉಪವಾಸ ಇದ್ದು ಅಸ್ವಸ್ಥ ಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು.
ಇದನ್ನೂ ಓದಿ:
ತಮ್ಮ ಭೂಮಿ ಉಳಿವಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೈರಮಂಗಲ ಗ್ರಾಮದ ವರ್ತಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಬುಧವಾರ ಬೆಳಗ್ಗೆಯಿಂದಲೇ ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿ ರೈತರ ಹೋರಾಟಕ್ಕೆ ಸಾಥ್ ನೀಡಿದ್ದರು.
ಇದರಿಂದ ಗ್ರಾಮದಲ್ಲಿ ರೈತರ ಹೋರಾಟಕ್ಕೆ ಸ್ಥಳೀಯರಿಂದಲೂ ಬೆಂಬಲ ವ್ಯಕ್ತವಾಗುತ್ತಿರುವುದು ಕಂಡುಬಂದಿತು.



