ಹೊಸದಿಗಂತ ಡಿಜಿಟಲ್ ಡೆಸ್ಕ್:
ತಡವಾಗಿ ಮನೆಗೆ ಬಂದ ಮಕ್ಕಳಿಗೆ ಜೋರು ಮಾಡೋ ಪೇರೆಂಟ್ಸ್ ಎಲ್ಲಾ ಕಡೆ ಇದ್ದಾರೆ. ಆದರೆ ಮಂಗಳಾರತಿ ಮಾಡಿ ಕರೆದುಕೊಳ್ಳೋ ಪೇರೆಂಟ್ಸ್ ನೋಡಿದ್ದೀರಾ?
@baxnal ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರಾತ್ರಿಯಾದ್ರು ಮನೆಗೆ ಬಾರದ ಮಗನಿಗಾಗಿ ತಂದೆ ಸೇರಿದಂತೆ ಮನೆಯ ಸದಸ್ಯರು ಕಾಯುವುದನ್ನು ಕಾಣಬಹುದು. ಯುವಕನೊಬ್ಬ ಬಾಗಿಲು ತೆರೆದು ಮೆಲ್ಲನೆ ಒಳಗೆ ಬರುತ್ತಿದ್ದಂತೆ ಆರತಿ ತಟ್ಟೆಯ ಹಿಡಿದು ತಂದೆಯೂ ಮಗನಿಗೆ ಆರತಿ ಮಾಡಿ ಮನೆಯೊಳಗೆ ಸ್ವಾಗತಿಸುವುದನ್ನು ನೀವು ನೋಡಬಹುದು.
ತಂದೆಯಿಂದ ಈ ರೀತಿ ಪ್ರತಿಕ್ರಿಯೆ ಬರುತ್ತಿದ್ದಂತೆ ಯುವಕ ಜೋರಾಗಿ ನಕ್ಕಿದ್ದಾನೆ. ಆದರೆ ವ್ಯಕ್ತಿಯೂ ಆರತಿ ತಟ್ಟೆಯಲ್ಲಿದ್ದ ಬೆಲ್ಟ್ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಇದನ್ನು ನೋಡಿದ ಮನೆಯ ಸದಸ್ಯರೆಲ್ಲರೂ ಜೋರಾಗಿ ನಗುತ್ತಿರುವುದನ್ನು ನೋಡಬಹುದು.
VIRAL | ಲೇಟಾಗಿ ಬಂದ ಮಗನಿಗೆ ಮಂಗಳಾರತಿ ಎತ್ತಿ ವೆಲ್ಕಮ್ ಎಂದ ತಂದೆ!

