ಇನ್ನು ಮೊಬೈಲ್‌ನಲ್ಲೇ ರಸಗೊಬ್ಬರ ಬುಕ್ಕಿಂಗ್: ರೈತರಿಗೆ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರೈತರು ಮಿತಿಮೀರಿ ಅನಗತ್ಯ ರಸಗೊಬ್ಬರ ಬಳಕೆ ಮಾಡುವುದನ್ನು ನಿಯಂತ್ರಿಸಲು ಕೇಂದ್ರ ಸರಕಾರವು ರಸಗೊಬ್ಬರ ಖರೀದಿಗೆ ಆಪ್ ಬಿಡುಗಡೆಗೊಳಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದರು. ಮೊಬೈಲ್ ಆಪ್ ಮೂಲಕ ರಸಗೊಬ್ಬರ ಕಾಯ್ದಿರಿಸಿ, ಖರೀದಿಸುವ ಬಗ್ಗೆ ಚಿತ್ರದುರ್ಗ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರಿಗೆ ಮಂಗಳವಾರ ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಯಾವುದೇ ತೊಂದರೆ ಇಲ್ಲದೇ ತಾವಿರುವ ಸ್ಥಳದಿಂದಲೇ … Continue reading ಇನ್ನು ಮೊಬೈಲ್‌ನಲ್ಲೇ ರಸಗೊಬ್ಬರ ಬುಕ್ಕಿಂಗ್: ರೈತರಿಗೆ ಹೊಸ ಡಿಜಿಟಲ್ ವ್ಯವಸ್ಥೆ ಜಾರಿ