Thursday, September 4, 2025

ಚಲನಚಿತ್ರ ಬರಹಗಾರ, ನಿರ್ದೇಶಕ ಎಸ್‌.ಎಸ್‌. ಡೇವಿಡ್‌ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖಳನಟನಾಗಿ ತನ್ನದೇ ಆದ ಗುರುತು ಮೂಡಿಸಿದ್ದ ಎಸ್‌.ಎಸ್‌. ಡೇವಿಡ್ (55) ಅವರು ಇಹಲೋಕ ತ್ಯಜಿಸಿದ್ದಾರೆ. ಹಲವು ಜನಪ್ರಿಯ ಸಿನಿಮಾಗಳಿಗೆ ಕಥೆ, ಸಂಭಾಷಣೆ ಬರೆದು ಹೆಸರಾಗಿದ್ದ ಅವರು, ಖಳನಟ ಹಾಗೂ ನಿರ್ದೇಶಕರಾಗಿಯೂ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದರು. ಅವರ ನಿಧನದ ಸುದ್ದಿ ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ.

ಡೇವಿಡ್ ಅವರಿಗೆ ಹೃದಯಾಘಾತ ಉಂಟಾಗಿ ನಿನ್ನೆ ಸಂಜೆ 7:30ರ ಸುಮಾರಿಗೆ ಆರ್‌.ಆರ್‌. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಕಾಲಿಕ ಅಗಲಿಕೆ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ನಿರೀಕ್ಷಿತವಲ್ಲದ ಆಘಾತವನ್ನು ತಂದಿದೆ.

ಪೊಲೀಸ್‌ ಸ್ಟೋರಿ, ಜೈಹಿಂದ್‌ ಸೇರಿದಂತೆ ಹಲವಾರು ಚಿತ್ರಗಳಿಗೆ ಕಥೆ ಮತ್ತು ಸಂಭಾಷಣೆ ಬರೆದು ಅವರು ಕನ್ನಡ ಸಿನಿಪ್ರೇಮಿಗಳ ಮೆಚ್ಚುಗೆ ಪಡೆದಿದ್ದರು. ಅವರ ಬರಹದಲ್ಲಿ ಸಾಮಾಜಿಕ ಕಳಕಳಿ, ತೀವ್ರ ಭಾವನೆಗಳು ಹಾಗೂ ಪ್ರೇಕ್ಷಕರನ್ನು ಸೆಳೆಯುವ ಶೈಲಿ ವಿಶೇಷವಾಗಿತ್ತು.

ಬರಹಗಾರರಷ್ಟೇ ಅಲ್ಲದೆ, ಎಸ್‌.ಎಸ್‌. ಡೇವಿಡ್ ಖಳನಟನಾಗಿಯೂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದರು. ತೀವ್ರ ವ್ಯಕ್ತಿತ್ವವನ್ನು ತೋರುವ ಪಾತ್ರಗಳಲ್ಲಿ ಅವರು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು. ಜೊತೆಗೆ ‘ಜೈಹಿಂದ್’ ಮತ್ತು ‘ಧೈರ್ಯ’ ಸಿನಿಮಾಗಳನ್ನು ನಿರ್ದೇಶಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು.

ಇದನ್ನೂ ಓದಿ