ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಜೈಪುರದ ಸ್ವಾಮಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಟ್ರಾಮಾ ಸೆಂಟರ್‌ನ ತೀವ್ರ ನಿಗಾ ಘಟಕದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ರೋಗಿಗಳು ಸಾವನ್ನಪ್ಪಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಆರಂಭವಾದ ಬೆಂಕಿ ವೇಗವಾಗಿ ಹರಡಿ, ವಿಷಕಾರಿ ಹೊಗೆಯನ್ನು ಬಿಡುಗಡೆ ಮಾಡಿದೆ. ಇದರಿಂದ ICUನಲ್ಲಿ ದಾಖಲಾಗಿದ್ದ 11 ರೋಗಿಗಳಲ್ಲಿ 6 ಮಂದಿ (ಇಬ್ಬರು ಮಹಿಳೆಯರು, ನಾಲ್ವರು ಪುರುಷರು) ಮೃತಪಟ್ಟಿದ್ದಾರೆ.
ಐಸಿಯುನಲ್ಲಿ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಆರು ಮಂದಿ ರೋಗಿಗಳು ಸಾವನಪ್ಪಿದ್ರೆ, ಇನ್ನೂ ಐದು ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಸಂಬಂಧಿಕರು ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯ ಸುರಕ್ಷತಾ ಸೌಲಭ್ಯಗಳ ಕೊರತೆಯನ್ನು ಆರೋಪಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ದುರಂತದ ನಂತರ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಬೆಂಕಿ ಎರಡನೇ ಮಹಡಿಯ ಟ್ರಾಮಾ ICUನಲ್ಲಿ ರಾತ್ರಿ 11:20ರ ಸುಮಾರಿಗೆ ಕಾಣಿಸಿಕೊಂಡಿತು. ಟ್ರಾಮಾ ಸೆಂಟರ್‌ನ ಇನ್‌ಚಾರ್ಜ್ ಡಾ. ಅನುರಾಗ್ ಧಾಕಡ್ ಅವರ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹರಡಿ, ಹೊಗೆ ಬಂದಿದೆ. ICUನಲ್ಲಿ 11 ರೋಗಿಗಳು ದಾಖಲಾಗಿದ್ದರು, ಅವರಲ್ಲಿ ಹೆಚ್ಚಿನವರು ಕೋಮಾದಲ್ಲಿದ್ದರು. ಸಿಬ್ಬಂದಿ ತಕ್ಷಣವೇ ರೋಗಿಗಳನ್ನು ಟ್ರಾಲಿಗಳಲ್ಲಿ ಸ್ಥಳಾಂತರಿಸಿದರೂ, ಸುರಕ್ಷತಾ ಸೌಲಭ್ಯಗಳ ಕೊರತೆಯಿಂದ ಪರಿಸ್ಥಿತಿ ಗಂಭೀರಗೊಂಡಿತು.
ನಾವು CPR ಮೂಲಕ ರೋಗಿಗಳನ್ನು ಉಳಿಸಲು ಪ್ರಯತ್ನಿಸಿದ್ದೇವೆ, ಆದರೆ ಆರು ಮಂದಿ ಬದುಕು ಉಳಿಸಲಾರದೆ ತೀರಿಕೊಂಡರುಎಂದು ಧಾಕಡ್ ಹೇಳಿದ್ದಾರೆ. ಇದೇ ಸಮಯದಲ್ಲಿ, ಪಕ್ಕದ ಸೆಮಿ-ICUನಲ್ಲಿದ್ದ 13 ರೋಗಿಗಳನ್ನು ಸಹ ಸುರಕ್ಷಿತವಾಗಿ ಶಿಫ್ಟ್ ಮಾಡಲಾಯ್ತು ಎಂದು ಹೇಳಿದ್ದಾರೆ.
ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : 6 ಮಂದಿ ಸಾವಿಗೆ ಸಿಬ್ಬಂದಿ ನೇರ ಹೊಣೆ?
