ಗೋವಿನಜೋಳದ ಹೊಟ್ಟಿನ ಬಣವೆಗೆ ಬೆಂಕಿ, ಕಂಗಾಲಾದ ರೈತ
ಹೊಸದಿಗಂತ ವರದಿ ಲಕ್ಷ್ಮೇಶ್ವರ: ಪಟ್ಟಣದ ಸವಣೂರ ರಸ್ತೆ ಪಕ್ಕದ ಜಮೀನಿನಲ್ಲಿ ರೈತರಾದ ದೇವಪ್ಪ ಮಲ್ಲಪ್ಪ ಬಸಾಪುರ ಎಂಬುವರಿಗೆ ಸೇರಿದ ಶೇಂಗಾ, ಕಡಲೆ, ಗೋವಿನಜೋಳದ ಹೊಟ್ಟಿನ ಬಣವೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ೧ ಲಕ್ಷ ರೂ ಮೌಲ್ಯದ ಹೊಟ್ಟು ಹಾನಿಯಾಗಿದ್ದು ರೈತ ಚಿಂತೆಗೀಡಾಗಿದ್ದಾರೆ.
Copy and paste this URL into your WordPress site to embed
Copy and paste this code into your site to embed