August 11, 2026
Tuesday, August 11, 2026
spot_img

ಗೋವಿನಜೋಳದ ಹೊಟ್ಟಿನ ಬಣವೆಗೆ ಬೆಂಕಿ, ಕಂಗಾಲಾದ ರೈತ

ಹೊಸದಿಗಂತ ವರದಿ ಲಕ್ಷ್ಮೇಶ್ವರ:

ಪಟ್ಟಣದ ಸವಣೂರ ರಸ್ತೆ ಪಕ್ಕದ ಜಮೀನಿನಲ್ಲಿ ರೈತರಾದ ದೇವಪ್ಪ ಮಲ್ಲಪ್ಪ ಬಸಾಪುರ ಎಂಬುವರಿಗೆ ಸೇರಿದ ಶೇಂಗಾ, ಕಡಲೆ, ಗೋವಿನಜೋಳದ ಹೊಟ್ಟಿನ ಬಣವೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲಾಗಿವೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ೧ ಲಕ್ಷ ರೂ ಮೌಲ್ಯದ ಹೊಟ್ಟು ಹಾನಿಯಾಗಿದ್ದು ರೈತ ಚಿಂತೆಗೀಡಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !