Friday, September 12, 2025

FOOD | ಕರಾವಳಿಯ ಸಾಂಪ್ರದಾಯಿಕ ರುಚಿ ಹಲಸಿನ ಹಣ್ಣಿನ ಗಟ್ಟಿ! ನೀವೂ ಒಮ್ಮೆ ಟ್ರೈ ಮಾಡಿ

ಕರಾವಳಿ ಭಾಗಕ್ಕೆ ಹಲಸು ಕೇವಲ ಹಣ್ಣಲ್ಲ, ಅದು ಸಂಸ್ಕೃತಿ ಮತ್ತು ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಹಲಸಿನ ಸೀಸನ್‌ ಬಂದರೆ ಅಲ್ಲಿ ಮನೆಮನೆಗೂ ಹಲಸಿನ ಖಾದ್ಯಗಳ ಸುವಾಸನೆ ತುಂಬುತ್ತದೆ. ಅದರಲ್ಲಿ ಜನಪ್ರಿಯವಾದದ್ದೇ ಹಲಸಿನ ಹಣ್ಣಿನ ಗಟ್ಟಿ. ಇದು ಆರೋಗ್ಯಕರವೂ ಆಗಿ, ರುಚಿಕರವೂ ಆಗಿದ್ದು, ವಿಶೇಷವಾಗಿ ಹಳ್ಳಿಗಳಲ್ಲಿ ಇದನ್ನು ತಯಾರಿಸಲಾಗುತ್ತದೆ.

ಬೇಕಾಗುವ ಪದಾರ್ಥಗಳು:

ಹಲಸಿನ ಹಣ್ಣು – 1 ಕಪ್ ಅಕ್ಕಿ (ಬೀಜ ತೆಗೆದದ್ದು)
ತೆಂಗಿನ ತುರಿ – ಅರ್ಧ ಕಪ್‌
ಬೆಲ್ಲ – ಕಾಲು ಕಪ್‌
ರುಚಿಗೆ ತಕ್ಕಷ್ಟು ಉಪ್ಪು
ಬಾಳೆ ಎಲೆಗಳು

ಮಾಡುವ ವಿಧಾನ:

ಮೊದಲಿಗೆ ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ಜೊತೆಗೆ ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.

ಈಗ ಬಾಳೆ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಹಬೆಯಲ್ಲಿ ಬೇಯಿಸಿ ಅಥವಾ ಒಲೆಯ ಮೇಲೆ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಇದರಿಂದ ಬಾಳೆ ಎಲೆ ಮೃದುವಾಗಿ ಮಡಚಲು ಸುಲಭವಾಗುತ್ತದೆ.

ಈಗ ನೆನೆಸಿದ ಅಕ್ಕಿ, ಹಲಸು, ತೆಂಗಿನತುರಿ, ಬೆಲ್ಲ ಮತ್ತು ಉಪ್ಪನ್ನು ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಸೇರಿಸುವ ಅಗತ್ಯವಿಲ್ಲ. ಬಳಿಕ ರುಬ್ಬಿಕೊಂಡ ಹಿಟ್ಟನ್ನು ಪಾತ್ರೆಗೆ ವರ್ಗಾಯಿಸಿ.

ನಂತರ ಒಂದು ಬಾಳೆ ಎಲೆಯ ಮೇಲೆ ಒಂದು ಹಿಡಿ ಹಿಟ್ಟು ಹಾಕಿ. ಬಳಿಕ ಅದನ್ನು ಅದನ್ನು ಆಯತಾಕಾರದಲ್ಲಿ ಮಡಿಸಿ. 30 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿದರೆ ಹಲಸಿನ ಹಣ್ಣಿನ ಗಟ್ಟಿ ಸವಿಲು ಸಿದ್ಧ.

ಇದನ್ನೂ ಓದಿ