Friday, August 29, 2025

Food | ಆಲೂ ಮಶ್ರೂಮ್ ಮಸಾಲಾ: ಅನ್ನ ಚಪಾತಿ ಜೊತೆ ಹೇಳಿಮಾಡಿಸಿದ ರೆಸಿಪಿ ಇದು! ಒಮ್ಮೆ ಟ್ರೈ ಮಾಡಿ

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಆಲೂ ಮಶ್ರೂಮ್ ಮಸಾಲಾ ಒಂದು ರುಚಿಕರ ಮತ್ತು ಪೌಷ್ಟಿಕ ಕರಿಯಾಗಿದೆ. ಮಶ್ರೂಮ್‌ನಲ್ಲಿ ಇರುವ ಪ್ರೋಟೀನ್, ವಿಟಮಿನ್‌ಗಳು ಹಾಗೂ ಆಲೂಗಡ್ಡೆಯಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳು ಸೇರಿ ಈ ತಿನಿಸು ದೇಹಕ್ಕೆ ಶಕ್ತಿ ನೀಡುವಂತದ್ದು. ಇದನ್ನು ಚಪಾತಿ, ಪೂರಿ, ನಾನ್ ಅಥವಾ ಅನ್ನದ ಜೊತೆಗೆ ಸೇವಿಸಬಹುದು.

ಬೇಕಾಗುವ ಸಾಮಗ್ರಿಗಳು

ಎಣ್ಣೆ – 2 ಟೀಸ್ಪೂನ್
ಗೋಡಂಬಿ – 2 ಟೀಸ್ಪೂನ್
ತುರಿದ ತೆಂಗಿನಕಾಯಿ – 2 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಏಲಕ್ಕಿ – 2
ಲವಂಗ – 2
ದಾಲ್ಚಿನ್ನಿ – ಸಣ್ಣ ತುಂಡು
ಗಸಗಸೆ – 1 ಟೀಸ್ಪೂನ್
ಈರುಳ್ಳಿ (ತೆಳುವಾಗಿ ಕತ್ತರಿಸಿದ) – ½ ಕಪ್
ಹಸಿಮೆಣಸು – 5
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಆಲೂಗಡ್ಡೆ – 1 ಕಪ್
ಮಶ್ರೂಮ್ – 1 ಕಪ್
ಅರಿಶಿನ – ¼ ಟೀಸ್ಪೂನ್
ಮೆಣಸಿನ ಪುಡಿ – ¼ ಟೀಸ್ಪೂನ್
ಗರಂ ಮಸಾಲ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ¼ ಕಪ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕಸೂರಿ ಮೇಥಿ – ಸ್ವಲ್ಪ

ತಯಾರಿಸುವ ವಿಧಾನ

ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಗೋಡಂಬಿ, ತುರಿದ ತೆಂಗಿನಕಾಯಿ, ಜೀರಿಗೆ, ಏಲಕ್ಕಿ, ಲವಂಗ, ದಾಲ್ಚಿನ್ನಿ ಹಾಗೂ ಗಸಗಸೆ ಹಾಕಿ ಹುರಿಯಿರಿ.

ನಂತರ ಈರುಳ್ಳಿ ಹಾಗೂ ಹಸಿಮೆಣಸನ್ನು ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ.

ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಸಮಯ ಹುರಿದು, ನಂತರ ಬೇಯಿಸಿದ ಆಲೂಗಡ್ಡೆ ಹಾಗೂ ಮಶ್ರೂಮ್ ಹಾಕಿ ಮಿಕ್ಸ್ ಮಾಡಿ. ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಗರಂ ಮಸಾಲ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಸೇರಿಸಿ ಕುಕ್ಕರ್ ಮುಚ್ಚಿ 2 ಸೀಟಿ ಬರುವವರೆಗೆ ಕೊನೆಗೆ ಕೊತ್ತಂಬರಿ ಸೊಪ್ಪು ಮತ್ತು ಕಸೂರಿ ಮೇಥಿ ಸೇರಿಸಿ ಮಿಕ್ಸ್ ಮಾಡಿ.

ಇದನ್ನೂ ಓದಿ