Sunday, September 14, 2025

FOOD | ಸಂಜೆಯ ಟೈಮ್ ಗೆ ಬೊಂಬಾಟ್ ಸ್ನಾಕ್ಸ್, ಕ್ರಿಸ್ಪಿ ಬೀಟ್‌ರೂಟ್ ಟಿಕ್ಕಿ!

ತಿಂಡಿ ಸಮಯದಲ್ಲಿ ಸ್ವಲ್ಪ ವಿಭಿನ್ನವಾದರೂ ಆರೋಗ್ಯಕರವಾಗಿರುವ ತಿನಿಸು ತಿನ್ನಬೇಕು ಅನ್ನಿಸುವಾಗ ಕ್ರಿಸ್ಪಿ ಬೀಟ್‌ರೂಟ್ ಟಿಕ್ಕಿ ಒಳ್ಳೆಯ ಆಯ್ಕೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವಂತಹ ಈ ರೆಸಿಪಿ ಚಹಾ ಸಮಯದಲ್ಲಿ ಅಥವಾ ಅತಿಥಿಗಳಿಗೆ ಬಿಸಿಬಿಸಿ ಸರ್ವ್ ಮಾಡಬಹುದು.

ಬೇಕಾಗುವ ಪದಾರ್ಥಗಳು:

ಉದ್ದಿನ ಬೇಳೆ – 2 ಕಪ್
ತುರಿದ ಬೀಟ್‌ರೂಟ್ – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಹಸಿರು ಮೆಣಸು – 2
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀ ಸ್ಪೂನ್
ಸೋಡಾ – ಸ್ವಲ್ಪ (ಐಚ್ಛಿಕ)
ಎಣ್ಣೆ – ಕರಿಯಲು

ಮಾಡುವ ವಿಧಾನ:

ಉದ್ದಿನ ಬೇಳೆಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೀರು ಹಾಕದೆ ಮಿಕ್ಸಿಯಲ್ಲಿ ಹಾಕಿ ಮೃದುವಾದ ಹಿಟ್ಟಿನಂತೆ ರುಬ್ಬಿಕೊಳ್ಳಿ.

ಈ ಹಿಟ್ಟಿಗೆ ನುಣ್ಣಗೆ ತುರಿದ ಬೀಟ್‌ರೂಟ್ ಸೇರಿಸಿ. ಅದಕ್ಕೆ ಉಪ್ಪು, ಸಣ್ಣಗೆ ಹೆಚ್ಚಿದ ಹಸಿರು ಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ವಡೆ ಹೆಚ್ಚು ಗರಿಗರಿಯಾಗಬೇಕೆಂದರೆ ಸ್ವಲ್ಪ ಸೋಡಾ ಸೇರಿಸಬಹುದು.

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿ. ಹಿಟ್ಟನ್ನು ಸಣ್ಣ ಉಂಡೆಗಳಂತೆ ಮಾಡಿ, ಕೈಯಲ್ಲಿ ಒತ್ತಿ ವಡೆಗಳ ಆಕಾರ ನೀಡಿ. ಬಿಸಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಎರಡೂ ಬದಿಗಳಿಂದ ಫ್ರೈ ಮಾಡಿದರೆ ಕ್ರಿಸ್ಪಿ ಬೀಟ್‌ರೂಟ್ ಟಿಕ್ಕಿ ರೆಡಿ.

ಇದನ್ನೂ ಓದಿ