ಹೊರಗಡೆ ಫುಡ್ ತಿಂದು ಬೋರ್ ಆಗಿದ್ದೀರಾ? ಮನೆಯಲ್ಲೇ ಸುಲಭವಾಗಿ, ಆರೋಗ್ಯಕರ ಮತ್ತು ರುಚಿಕರವಾದ ವೆಜ್ ಕಟ್ಲೆಟ್ ತಯಾರಿಸಬಹುದು. ರೆಸ್ಟೋರೆಂಟ್ ಸ್ಟೈಲ್ ಕಟ್ಲೆಟ್ ಮನೆಯಲ್ಲೇ ಸಿದ್ಧಪಡಿಸಬಹುದು.
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – 2
ಕ್ಯಾರೆಟ್ – ¼ ಕಪ್
ಬೀನ್ಸ್ – ¼ ಕಪ್
ಸ್ವೀಟ್ ಕಾರ್ನ್ – ¼ ಕಪ್
ಬಟಾಣಿ – ½ ಕಪ್
ಬೀಟ್ರೂಟ್ – ½ ಕಪ್
ಬ್ರೆಡ್ ಕ್ರಂಬ್ಸ್ – ¼ ಕಪ್
ಮೆಣಸಿನ ಪುಡಿ – ½ ಟೀಸ್ಪೂನ್
ಜೀರಿಗೆ ಪುಡಿ – ¼ ಟೀಸ್ಪೂನ್
ಗರಂ ಮಸಾಲಾ – ¼ ಟೀಸ್ಪೂನ್
ಆಮ್ಚೂರ್ ಪುಡಿ – ½ ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕಾರ್ನ್ ಫ್ಲೇಕ್ಸ್ – 1 ಕಪ್
ಕಾರ್ನ್ ಹಿಟ್ಟು – 3 ಟೇಬಲ್ ಸ್ಪೂನ್
ಮೈದಾ – 2 ಟೇಬಲ್ ಸ್ಪೂನ್
ಪೆಪ್ಪರ್ ಪುಡಿ – ¼ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಪ್ರೆಷರ್ ಕುಕ್ಕರ್‌ನಲ್ಲಿ 2 ಕಪ್ ನೀರು ಹಾಕಿ, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಸ್ವೀಟ್ ಕಾರ್ನ್, ಬಟಾಣಿ, ಬೀಟ್ರೂಟ್ ಮತ್ತು ಸ್ವಲ್ಪ ಉಪ್ಪು ಸೇರಿಸಿ. 5 ಸೀಟಿ ಹೊಡೆಸಿ.
ಬೇಯಿಸಿದ ತರಕಾರಿಗಳನ್ನು ತಣ್ಣಗಾದ ಬಳಿಕ ಮ್ಯಾಶ್ ಮಾಡಿ. ಬ್ರೆಡ್ ಕ್ರಂಬ್ಸ್ ಸೇರಿಸಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಆಮ್ಚೂರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಚೆನ್ನಾಗಿ ಮಿಶ್ರಣ ಮಾಡಿ.
ಕಾರ್ನ್ ಹಿಟ್ಟು, ಮೈದಾ, ಪೆಪ್ಪರ್ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಕಾರ್ನ್ ಹಿಟ್ಟು ಬ್ಯಾಟರ್ ತಯಾರಿಸಿ.
ತರಕಾರಿ ಮಿಶ್ರಣವನ್ನು ಸಿಲಿಂಡರ್ ಆಕಾರದ ಕಟ್ಲೆಟ್ ಮಾಡಿ, ಕಾರ್ನ್ ಹಿಟ್ಟು ಬ್ಯಾಟರ್‌ನಲ್ಲಿ ಡಿಪ್ ಮಾಡಿ. ನಂತರ ಬ್ರೆಡ್ ಕ್ರಂಬ್ಸ್‌ನಿಂದ ಕೋಟ್ ಮಾಡಿ. 15–20 ನಿಮಿಷಗಳ ಕಾಲ ಮೀಡಿಯಂ ಫ್ಲೇಮ್‌ನಲ್ಲಿ ಎಣ್ಣೆಯಲ್ಲಿ ಫ್ರೈ ಮಾಡಿ. ಗೋಲ್ಡ್ ಬಣ್ಣ ಬಂದ ಮೇಲೆ ತೆಗೆಯಿರಿ.