ಹೆಸರು ಬೇಳೆ ಹಲ್ವಾ ಭಾರತದ ಸಿಹಿ ತಿನಿಸುಗಳಲ್ಲಿ ಬಹಳ ಜನಪ್ರಿಯ. ಇದು ಹಾಲು, ತುಪ್ಪ ಮತ್ತು ಬೇಳೆ ಮಿಶ್ರಣದಿಂದ ಸಿದ್ಧವಾಗುವ ರುಚಿಯಾದ ಸ್ವೀಟ್. ಮಾಡೋದು ಕೂಡ ತುಂಬಾನೇ ಸುಲಭ.
ಬೇಕಾಗುವ ಪದಾರ್ಥಗಳು:
ಹೆಸರು ಬೇಳೆ – 3 ಬಟ್ಟಲು
ತುಪ್ಪ – 3 ಬಟ್ಟಲು
ಸಕ್ಕರೆ – 2 ಬಟ್ಟಲು
ಹಾಲು – 5 ಬಟ್ಟಲು
ಏಲಕ್ಕಿ ಪುಡಿ – ¾ ಟೀ ಚಮಚ
ಕೇಸರಿ (ಬಿಸಿ ನೀರಿನಲ್ಲಿ ನೆನೆಸಿದ) – 10 ಎಳೆ
ಗೋಡಂಬಿ – 4 ಟೇಬಲ್ ಚಮಚ
ಬಾದಾಮಿ ಮತ್ತು ದ್ರಾಕ್ಷಿ – ತಲಾ 2 ಟೇಬಲ್ ಚಮಚ
ಮಾಡುವ ವಿಧಾನ:
ಹೆಸರು ಬೇಳೆಯನ್ನು ರಾತ್ರಿಯೇ ನೆನೆಸಿರಿ. ನೀರು ಬಿಸಿದು, ಸ್ವಲ್ಪ ನೀರಿನಲ್ಲಿ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ 2 ಬಟ್ಟಲು ತುಪ್ಪವನ್ನು ಬಿಸಿ ಮಾಡಿ. ರುಬ್ಬಿದ ಪೇಸ್ಟ್ ಅನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ತುಪ್ಪ ಪ್ರತ್ಯೇಕವಾದಾಗ, ಸಕ್ಕರೆ ಮತ್ತು ಹಾಲು ಸೇರಿಸಿ ಸಣ್ಣ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಿ.
ಮಿಶ್ರಣದಲ್ಲಿ ಉಳಿದ ತುಪ್ಪವನ್ನು ಸೇರಿಸಿ 5-7 ನಿಮಿಷ ಹುರಿಯಿರಿ. ನಂತರ ಕೇಸರಿ ಮತ್ತು ಒಣ ಹಣ್ಣುಗಳನ್ನು ಹಾಕಿ ಒಮ್ಮೆ ಮಿಶ್ರಣ ಮಾಡಿದರೆ ಹೆಸರು ಬೇಳೆ ಹಲ್ವಾ ರೆಡಿ.