Friday, September 12, 2025

FOOD | ಯಮ್ಮಿ.. ಯಮ್ಮಿ.. ಚೀಸ್ ಬಾಲ್ಸ್ ಮಾಡೋದು ಹೇಗೆ ಗೊತ್ತಾ?

ತಿಂಡಿ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಬಹಳ ಇಷ್ಟ. ಅದರಲ್ಲಿ ಚೀಸ್ ಸೇರಿಸಿದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಚೀಸ್ ಬಾಲ್ಸ್ ಒಂದು ಸೂಪರ್ ಕ್ರಂಚಿ ಸ್ನ್ಯಾಕ್ಸ್ ಆಗಿದ್ದು, ಸಂಜೆ ಟೀ ಟೈಮ್‌ಗಾಗಲಿ ಅಥವಾ ಪಾರ್ಟಿ ಸ್ಟಾರ್ಟರ್‌ಗಾಗಲಿ ಸೂಕ್ತ.

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ – 3
ಚೀಸ್ – 1 ಕಪ್
ಬ್ರೆಡ್ ಪುಡಿ – 1 ಕಪ್
ಹಸಿಮೆಣಸು – 2 (ಸಣ್ಣಸಣ್ಣವಾಗಿ ಕತ್ತರಿಸಿದವು)
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್ (ಸಣ್ಣಸಣ್ಣವಾಗಿ ಕತ್ತರಿಸಿದವು)
ಮೆಣಸಿನ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಎಣ್ಣೆ – ಕರಿಯಲು

ತಯಾರಿಸುವ ವಿಧಾನ

ಮೊದಲು ಒಂದು ಬೌಲ್‌ನಲ್ಲಿ ಮ್ಯಾಶ್ ಮಾಡಿದ ಆಲೂಗಡ್ಡೆ, ಗ್ರೇಟ್ ಮಾಡಿದ ಚೀಸ್, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಸಣ್ಣ ಉಂಡೆಗಳಂತೆ ತಯಾರಿಸಿಕೊಳ್ಳಿ.

ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್ ಮತ್ತು ಸ್ವಲ್ಪ ನೀರು ಹಾಕಿ ಸ್ಲರಿ ತಯಾರಿಸಿ. ತಯಾರಿಸಿದ ಉಂಡೆಗಳನ್ನು ಮೊದಲು ಕಾರ್ನ್ ಫ್ಲೋರ್ ಮಿಶ್ರಣದಲ್ಲಿ ಮುಳುಗಿಸಿ, ನಂತರ ಬ್ರೆಡ್ ಪುಡಿಯಲ್ಲಿ ಹೊರಳಿಸಿ. ಕಾದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ಬಿಸಿ ಬಿಸಿ ಚೀಸ್ ಬಾಲ್ಸ್‌ಗಳನ್ನು ಕೆಚಪ್ ನೊಂದಿಗೆ ಸವಿಯಿರಿ.

ಇದನ್ನೂ ಓದಿ