ಬೆಳಗಾವಿಯಲ್ಲಿ ಫ್ರಿಡ್ಜ್ ದುರಂತ: ಚಿಕಿತ್ಸೆ ಫಲಿಸದೆ ತಂದೆ-ಮಗ ಸಾ*ವು, ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

ಹೊಸದಿಗಂತ ವರದಿ ಬೆಳಗಾವಿ: ಗಣೇಶೋತ್ಸವ ಆಚರಣೆಯ ವೇಳೆ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಬೆಂಕಿಯ ಕೆನ್ನಾಲೆಗೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದ ಘಟನೆಗೆ ಸಂಬಂಧಿಸಿದಂತೆ, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಮತ್ತು ಮಗ ಕೂಡ ಬುಧವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಜಾನನ ಧಮೋನೆ ಹಾಗೂ ಅವರ ಪುತ್ರ ರೋಶನ್ ಧಮೋನೆ ಮೃತಪಟ್ಟ ದುರ್ದೈವಿಗಳು. ಇದರೊಂದಿಗೆ ಈ ದುರಂತದಲ್ಲಿ ಸಾವನ್ನಪ್ಪಿದ ಒಂದೇ ಕುಟುಂಬದ ಸದಸ್ಯರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. … Continue reading ಬೆಳಗಾವಿಯಲ್ಲಿ ಫ್ರಿಡ್ಜ್ ದುರಂತ: ಚಿಕಿತ್ಸೆ ಫಲಿಸದೆ ತಂದೆ-ಮಗ ಸಾ*ವು, ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ