October 9, 2026
Friday, October 9, 2026
spot_img

ಬೆಳಗಾವಿಯಲ್ಲಿ ಫ್ರಿಡ್ಜ್ ದುರಂತ: ಚಿಕಿತ್ಸೆ ಫಲಿಸದೆ ತಂದೆ-ಮಗ ಸಾ*ವು, ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

ಹೊಸದಿಗಂತ ವರದಿ ಬೆಳಗಾವಿ:

ಗಣೇಶೋತ್ಸವ ಆಚರಣೆಯ ವೇಳೆ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಬೆಂಕಿಯ ಕೆನ್ನಾಲೆಗೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದ ಘಟನೆಗೆ ಸಂಬಂಧಿಸಿದಂತೆ, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಮತ್ತು ಮಗ ಕೂಡ ಬುಧವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಜಾನನ ಧಮೋನೆ ಹಾಗೂ ಅವರ ಪುತ್ರ ರೋಶನ್ ಧಮೋನೆ ಮೃತಪಟ್ಟ ದುರ್ದೈವಿಗಳು. ಇದರೊಂದಿಗೆ ಈ ದುರಂತದಲ್ಲಿ ಸಾವನ್ನಪ್ಪಿದ ಒಂದೇ ಕುಟುಂಬದ ಸದಸ್ಯರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:

ಈ ಮೊದಲು ಘಟನೆಯಲ್ಲಿ ಸಜೀವ ದಹನಗೊಂಡಿದ್ದ ಚವ್ಹಾಟಗಲ್ಲಿಯ ನಿವಾಸಿಗಳಾದ ಭಾರತಿ ರಾಜಾರಾಮ ದಮೋನೆ (50), ಶಾರದಾ ಗಜಾನನ ದಮೋನೆ (45), ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿತ್ತು.

ಕುಟುಂಬದ ನಾಲ್ವರನ್ನು ಕಳೆದುಕೊಂಡು ಶೋಕದಲ್ಲಿದ್ದ ಚವ್ಹಾಟಗಲ್ಲಿ ನಿವಾಸಿಗಳಿಗೆ, ಇದೀಗ ತಂದೆ ಮತ್ತು ಮಗನ ಸಾವಿನ ಸುದ್ದಿ ಮತ್ತಷ್ಟು ಆಘಾತ ತಂದೊಡ್ಡಿದೆ.

Must Read