ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ಹಾ ಹುಲಿ ಮೀಸಲು ಪ್ರದೇಶದಲ್ಲಿ ಆಯೋಜಿಸಲಾದ ಆನೆಗಳ 7 ದಿನಗಳ ಪುನರ್ಯೌವನ ಶಿಬಿರ ಮುಕ್ತಾಯಗೊಂಡಿದೆ. ಶಿಬಿರದಲ್ಲಿ ಆನೆಗಳಿಗೆ ಎಂಜಾಯ್ ಮಾಡಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆನೆಗಳಿಗೆ ವಿವಿಧ ರೀತಿಯ ಜೀವಸತ್ವಗಳು ಮತ್ತು ಖನಿಜಾಂಶಯುಕ್ತ ಆಹಾರಗಳನ್ನು ನೀಡಲಾಯಿತು. ಅವುಗಳಿಗೆ ಬಾಳೆಹಣ್ಣು, ಜೋಳ, ಅನಾನಸ್, ತೆಂಗಿನಕಾಯಿ ಮತ್ತು ಪಪ್ಪಾಯಿಯಂತಹ ಕಾಲೋಚಿತ ಹಣ್ಣುಗಳನ್ನು ಸಹ ನೀಡಲಾಯಿತು. ಎಣ್ಣೆ ಮಸಾಜ್ ಮಾಡಿದ್ದು ಶಿಬಿರದ ಮತ್ತೊಂದು ವಿಶೇಷವಾಗಿತ್ತು. ಈ ಸಮಯದಲ್ಲಿ ಮಾವುತರಿಂದ ಹಿಡಿದು ಅಧಿಕಾರಿಗಳು ಮತ್ತು ಹುಲಿ ಮೀಸಲು ಪ್ರದೇಶದ ನೌಕರರು ಆನೆಗಳ ಆರೈಕೆಯಲ್ಲಿ ತೊಡಗಿದ್ದರು.
ಶಿಬಿರದ ಸಮಯದಲ್ಲಿ ಆನೆಗಳಿಗೆ ನಿತ್ಯ ಬೆಳಗ್ಗೆ ಕಾಡಿನಲ್ಲಿ ಸ್ನಾನ ಮಾಡಿದ ನಂತರ ಪುನರ್ಯೌವನಗೊಳಿಸುವ ಶಿಬಿರಕ್ಕೆ ತರಲಾಗುತ್ತಿತ್ತು. ಇದರ ನಂತರ ಅವುಗಳ ಪಾದಗಳು ಮತ್ತು ತಲೆಗೆ ಬೇವಿನ ಎಣ್ಣೆ ಮತ್ತು ಕ್ಯಾಸ್ಟರ್ ಆಯಿಲ್‌ನಿಂದ ಮಸಾಜ್ ಮಾಡಲಾಗುತ್ತಿತ್ತು. ಆ ಬಳಿಕ ಆನೆಗಳಿಗೆ ಬಾಳೆಹಣ್ಣು, ಜೋಳ, ಅನಾನಸ್, ತೆಂಗಿನಕಾಯಿ ಮುಂತಾದ ಪೌಷ್ಟಿಕ ಹಣ್ಣುಗಳನ್ನು ತಿನ್ನಿಸಿ ನಂತರ ಕಾಡಿಗೆ ಬಿಡಲಾಗುತ್ತಿತ್ತು. ಮಧ್ಯಾಹ್ನ ಆನೆಗಳನ್ನು ಮತ್ತೆ ಕಾಡಿನಿಂದ ತಂದು ಸ್ನಾನ ಮಾಡಿಸಲಾಗುತ್ತದೆ. ಇದರ ನಂತರ ಅವುಗಳಿಗೆ ಮತ್ತೆ ಎಣ್ಣೆಯಿಂದ ಮಸಾಜ್ ಮಾಡಿ ರೊಟ್ಟಿ, ಬೆಲ್ಲ ಮತ್ತು ಅನೇಕ ಹಣ್ಣುಗಳನ್ನು ತಿನ್ನಿಸಿ ಕಾಡಿಗೆ ಬಿಡಲಾಗುತ್ತದೆ.