Saturday, September 27, 2025

ಲಾಂಗ್‌ ಹಿಡಿದು ಪುಂಡಾಟ ಮೆರೆದಿದ್ದ ಗ್ಯಾಂಗ್‌ ಅರೆಸ್ಟ್‌: ದುರುಳರ ಮಾಸ್ಟರ್ ಪ್ಲಾನ್ ಏನಾಗಿತ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಲ್ಲಿಸಿದ್ದ ಕಾರಿನ ಗ್ಲಾಸ್‌ ಒಡೆದು ಅಟ್ಟಹಾಸ ಮೆರೆದಿದ್ದ ಐವರು ಪುಂಡರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಲಿಖಿತ್ , ಜಯಂತ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಏರಿಯಾದಲ್ಲಿ ಆರೋಪಿಗಳಿಗೆ ಸಾರ್ವಜನಿಕರೊಬ್ಬರು ತಡೆದು ಬುದ್ಧಿ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡಿದ್ದ ಆರೋಪಿಗಳು ತಡರಾತ್ರಿ ನಿಲ್ಲಿಸಿದ್ದ ಕಾರಿನ ಮೇಲೆ ಲಾಂಗ್‌ನಿಂ ಗ್ಲಾಸ್‌ ಒಡೆದಿದ್ದರು. ಫೀಲ್ಡ್‌ನಲ್ಲಿ ಹೆಸರು ಮಾಡಲು ಕೃತ್ಯ ಎಸಗಿರುವುದಾಗಿ ಕೇಳಿಬಂದಿದೆ.

ಈ ಸಂಬಂಧ ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ 16, ಎಪಿ ನಗರದಲ್ಲಿ 6, ಮಾದನಾಯಕನ ಹಳ್ಳಿಯಲ್ಲಿ 3, ದೊಡ್ಡ ಬಳ್ಳಾಪುರದಲ್ಲಿ 3 ಕೇಸ್‌ಗಳು ಸೇರಿ ಒಟ್ಟು 28 ಪ್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿದ್ದವು. ತನಿಖೆ ಕೈಗೊಂಡಿದ್ದ ಪೊಲೀಸರು ಸೊಂಡೆಕೊಪ್ಪದಲ್ಲಿ ಐವರನ್ನು ಬಂಧಿಸಿದ್ದಾರೆ.