ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಬಸ್ ಹರಿದು 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಬೀದರ್‌ನ ಜನವಾಡಾ ಗ್ರಾಮದ ಪೊಲೀಸ್ ಕ್ವಾಟರ್ಸ್ ಬಳಿ ನಡೆದಿದೆ.
ಗಡಿಕುಶನೂರು ಗ್ರಾಮದ ರುತ್ವಿ, ಶಾಲೆಯಿಂದ ವಾಪಸ್ ಶಾಲಾ ವಾಹನದಲ್ಲಿ ಮನೆಗೆ ಬಂದವಳು ಸ್ಕೂಲ್ ಬಸ್ ಇಳಿದು ಬಸ್ ಪಕ್ಕಕ್ಕೇ ನಿಂತಿದ್ದಳು. ಬಾಲಕಿ ಬಸ್ ಬಳಿ ಇರುವುದನ್ನ ಗಮನಿಸದೆ ಆಕೆಯೆ ಮೇಲೆಯೇ ಬಸ್ ಓಡಿಸಿದ್ದಾನೆ. ಈ ವೇಳೆ ಬಸ್‌ಗೆ ಸಿಲುಕಿ ರುತ್ವಿ ಸಾವನ್ನಪ್ಪಿದ್ದಾಳೆ. ಜನವಾಡಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ತನ್ನದೇ ಸ್ಕೂಲಿನ ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ದಾರುಣ ಸಾವು

