ಹೊಸದಿಗಂತ ವರದಿ ಯಾದಗಿರಿ:
ವಸತಿ ನಿಲಯದ ಹಾಸ್ಟೇಲ್ ನಲ್ಲಿ ಶೌಚ ಮಾಡುವಾಗಲೇ ವಿದ್ಯಾರ್ಥಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ನಡೆದಿದೆ.
ನಾಗರಿಕ ಸಮಾಜ ತಲೆ ತಗ್ಗಿಸುವಂತ ಕೃತ್ಯಕ್ಕೆ ವಿದ್ಯಾರ್ಥಿನಿ ಹೆರಿಗೆ ಸಾಕ್ಷಿಯಾಗಿದೆ.ವಿಧ್ಯಾರ್ಥಿನಿ ಗರ್ಭಿಣಿ ಅನ್ನೋದನ್ನೇ ಹಾಸ್ಟೆಲ್ ಸಿಬ್ಬಂದಿಗಳು ಮುಚ್ಚಿಟ್ಟಿದ್ರಾ ಎಂಬ ಅನುಮಾನ ಇದೀಗ ಕಾಡುತ್ತಿದೆ.
ವಿದ್ಯಾರ್ಥಿನಿ ಹೆರಿಗೆಯಿಂದ ಮಕ್ಕಳ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಾಗಿದೆ
ಈ ತರಹದ ದುರ್ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು ಬೇಸರ ತಂದಿದೆ ಎಂದು ಆಯೋಗ ತಿಳಿಸಿದೆ. ಮಗುವಿನ ದೈಹಿಕ ಬದಲಾವಣೆ ಆದ ಸಂದರ್ಭದಲ್ಲಿ ಅಧಿಕಾರಿಗಳು ಗಮನಹರಿಸಬೇಕಿತ್ತು. ತಿಂಗಳಲ್ಲಿ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಬೇಕಿತ್ತು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಘಟನೆಯಲ್ಲಿ ಎಡವಿದ್ದಾರೆ ಎಂದಿದೆ.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ, ವಸತಿ ಶಾಲೆ ಪ್ರಾಚಾರ್ಯ, ವಾರ್ಡನ್, ವರ್ಗ ಶಿಕ್ಷಕಿ ಹಾಗೂ ಸ್ಟಾಪ್ ನರ್ಸ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ತಿಳಿಸಿದ್ದಾರೆ