Saturday, October 4, 2025

ಚಿನ್ನ-ಬೆಳ್ಳಿ ಬೆಲೆ ಕಡಿಮೆ ಆಯ್ತಂತೆ: ಎಷ್ಟು ಅಂತೀರಾ? ಇಲ್ಲಿ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಸಾಮಾನ್ಯವಾಗಿ ಹೂಡಿಕೆದಾರರು ಹಾಗೂ ಗ್ರಾಹಕರು ಗಮನಿಸುತ್ತಿರುವ ಅಮೂಲ್ಯ ಲೋಹಗಳ ದರದಲ್ಲಿ ಈ ಬದಲಾವಣೆ ಕಂಡುಬಂದಿದ್ದು, ಮಾರುಕಟ್ಟೆ ತಜ್ಞರ ಪ್ರಕಾರ ಇದು ಅಂತಾರಾಷ್ಟ್ರೀಯ ಪರಿಸ್ಥಿತಿಯ ಪರಿಣಾಮವಾಗಿದೆ.

ಭಾರತದಲ್ಲಿ ಚಿನ್ನದ ದರ: 22 ಕ್ಯಾರೆಟ್ ಚಿನ್ನದ ದರ ಇಂದು ಪ್ರತಿ ಗ್ರಾಂಗೆ 10,820 ರೂ ಆಗಿದ್ದು, 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 11,804 ರೂ ದಾಖಲೆಯಾಗಿದೆ. 18 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 8,853 ರೂ ಇದೆ.

ಭಾರತದಲ್ಲಿ ಬೆಳ್ಳಿ ದರ: ಪ್ರತಿ ಗ್ರಾಂ ಬೆಳ್ಳಿಯ ದರ 151 ರೂ ಆಗಿದ್ದು, ಕೆಲವು ರಾಜ್ಯಗಳಲ್ಲಿ 161 ರೂ ವರೆಗೂ ತಲುಪಿದೆ.

ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ ಮತ್ತು ಕೋಲ್ಕತಾ ನಗರಗಳಲ್ಲಿ 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 10,820 ರೂ ಆಗಿದೆ. ದೆಹಲಿ ಮತ್ತು ಜೈಪುರದಲ್ಲಿ ಸ್ವಲ್ಪ ಹೆಚ್ಚಾಗಿ 10,835 ರೂ ದಾಖಲೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ 151 ರೂ ಇದೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರಂತರವಾಗಿ ಬದಲಾಗುತ್ತಿದ್ದು, ಹೂಡಿಕೆ ಮಾಡುವವರು ದಿನನಿತ್ಯದ ದರವನ್ನು ಗಮನಿಸುವುದು ಅಗತ್ಯ. ಇಂದು ಕಂಡ ಇಳಿಕೆ ಗ್ರಾಹಕರಿಗೆ ಖುಷಿಯ ಸಂಗತಿಯೇ ಆದರೂ, ಭವಿಷ್ಯದಲ್ಲಿ ದರವು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಸೂಚಿಸಿದ್ದಾರೆ.