Friday, November 7, 2025

ಮಿಡಲ್‌ ಕ್ಲಾಸ್‌ ಮಂದಿಗೆ ಮುಟ್ಟೋಕಾಗಲ್ಲ ಚಿನ್ನ! ಇಂದಿನ ದರ ಹೀಗಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನದ ಬೆಲೆ ಭಾರಿ ಇಳಿಕೆ ಹಾದಿಯಲ್ಲಿರುವಾಗಲೇ ಇಂದು ಕೊಂಚ ಹೆಚ್ಚಳ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತವಾದ ಹಿನ್ನಲೆ ಚಿನ್ನದ ಬೆಲೆ ಬೆಲೆ ಏರಿಕೆ ಕಂಡಿದೆ.

ನವೆಂಬರ್ 6 ಗುರುವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,191 ರೂಪಾಯಿ ಇದ್ದು, ಇಂದು 43 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,21 910 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ ಇಂದು ಒಟ್ಟು 430 ರೂ ಏರಿಕೆ ಆಗಿದೆ.

22 ಕ್ಯಾರೆಟ್ 1 ಗ್ರಾಂ ಬೆಲೆ 11,175 ರೂಪಾಯಿ ಇದ್ದು, 40 ರೂ ಏರಿಕೆ ಕಂಡಿದೆ. 10 ಗ್ರಾಂ ಬೆಲೆ 1,11,750 ರೂಪಾಯಿ ಇದೆ. ಇಂದು 400 ರೂ ಏರಿಕೆ ಆಗಿದೆ.

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12191 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,21,910 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

error: Content is protected !!