Gold Rate | ಬಂಗಾರ ಪ್ರಿಯರಿಗೆ ಶಾಕ್: ಸತತ ಎರಡನೇ ದಿನವೂ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಬೆಲೆಬಾಳುವ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳ ಪರಿಣಾಮವಾಗಿ ಭಾರತದಲ್ಲೂ ಸತತ ಎರಡನೇ ದಿನವೂ ಬೆಲೆಗಳು ಏರಿಕೆಯತ್ತ ಮುಖ ಮಾಡಿವೆ. ಬುಧವಾರದಂದು ಪ್ರತಿ ಗ್ರಾಂ ಚಿನ್ನಕ್ಕೆ 195 ರೂಪಾಯಿ ಏರಿಕೆಯಾಗಿದ್ದರೆ, ಇಂದು ಗುರುವಾರ ಮತ್ತೆ 105 ರೂಪಾಯಿಗಳಷ್ಟು ಜಿಗಿತ ಕಂಡಿದೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿಯೇ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ಬರೋಬ್ಬರಿ 300 ರೂಪಾಯಿಗಳಷ್ಟು ಹೆಚ್ಚಳವಾದಂತಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲೂ ಬಂಗಾರದ … Continue reading Gold Rate | ಬಂಗಾರ ಪ್ರಿಯರಿಗೆ ಶಾಕ್: ಸತತ ಎರಡನೇ ದಿನವೂ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ