August 24, 2026
Monday, August 24, 2026
spot_img

Gold Rate | ಬಂಗಾರ ಪ್ರಿಯರಿಗೆ ಶಾಕ್: ಸತತ ಎರಡನೇ ದಿನವೂ ಏರಿಕೆ ಕಂಡ ಚಿನ್ನ-ಬೆಳ್ಳಿ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಬೆಲೆಬಾಳುವ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳ ಪರಿಣಾಮವಾಗಿ ಭಾರತದಲ್ಲೂ ಸತತ ಎರಡನೇ ದಿನವೂ ಬೆಲೆಗಳು ಏರಿಕೆಯತ್ತ ಮುಖ ಮಾಡಿವೆ.

ಬುಧವಾರದಂದು ಪ್ರತಿ ಗ್ರಾಂ ಚಿನ್ನಕ್ಕೆ 195 ರೂಪಾಯಿ ಏರಿಕೆಯಾಗಿದ್ದರೆ, ಇಂದು ಗುರುವಾರ ಮತ್ತೆ 105 ರೂಪಾಯಿಗಳಷ್ಟು ಜಿಗಿತ ಕಂಡಿದೆ. ಇದರೊಂದಿಗೆ ಕಳೆದ ಎರಡು ದಿನಗಳಲ್ಲಿಯೇ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ಬರೋಬ್ಬರಿ 300 ರೂಪಾಯಿಗಳಷ್ಟು ಹೆಚ್ಚಳವಾದಂತಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲೂ ಬಂಗಾರದ ಬೆಲೆ ಗಣನೀಯವಾಗಿ ಏರಿಕೆ ಕಂಡಿರುವುದು ಇಲ್ಲಿನ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿದೆ.

ಇಂದಿನ ಚಿನ್ನದ ಬೆಲೆ (10 ಗ್ರಾಂ):
22 ಕ್ಯಾರಟ್ ಚಿನ್ನ: 1,39,750 ರೂಪಾಯಿ.

24 ಕ್ಯಾರಟ್ (ಅಪರಂಜಿ) ಚಿನ್ನ: 1,52,460 ರೂಪಾಯಿ.

ಬೆಂಗಳೂರಿನಲ್ಲಿಯೂ ಸಹ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 1,39,750 ರೂಪಾಯಿಗಳ ಆಸುಪಾಸಿನಲ್ಲಿದೆ.

ಚಿನ್ನದ ದರ ಏರಿಕೆಯ ಬೆನ್ನಲ್ಲೇ ಬೆಳ್ಳಿಯ ಬೆಲೆಯೂ ಸತತ ಎರಡನೇ ಬಾರಿಗೆ ಏರಿಕೆ ಕಂಡಿದೆ. ನಿನ್ನೆ ಪ್ರತಿ ಗ್ರಾಂಗೆ 10 ರೂಪಾಯಿ ಏರಿಕೆಯಾಗಿದ್ದ ಬೆಳ್ಳಿ, ಇಂದು ಮತ್ತೆ 5 ರೂಪಾಯಿ ಹೆಚ್ಚಾಗಿದೆ. ಪ್ರಸ್ತುತ ಭಾರತದಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 27,000 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿಯೂ ಬೆಳ್ಳಿ ದರ 100 ಗ್ರಾಂಗೆ 27,000 ರೂಪಾಯಿ ಇದ್ದರೆ, ತಮಿಳುನಾಡು ಮತ್ತು ಕೇರಳದಂತಹ ನೆರೆರಾಜ್ಯಗಳಲ್ಲಿ ಈ ಬೆಲೆ 27,500 ರೂಪಾಯಿಗಳವರೆಗೂ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !