Tuesday, December 30, 2025

ಪವಿತ್ರಾ ಗೌಡಗೆ ಗುಡ್ ನ್ಯೂಸ್: ಕೋರ್ಟ್‌ನಿಂದ ಸಿಕ್ಕೇ ಬಿಡ್ತು ಈ ವಿಚಾರಕ್ಕೆ ಗ್ರೀನ್ ಸಿಗ್ನಲ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಪವಿತ್ರಾ ಗೌಡ ಸೇರಿ ಮೂವರಿಗೆ ಮನೆಯೂಟಕ್ಕೆ ಅವಕಾಶ ನೀಡಿ, ಕೋರ್ಟ್ ಆದೇಶ ನೀಡಿದೆ.

ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಮನೆಯೂಟಬೇಕೆಂದು ಆರೋಪಿ ಪವಿತ್ರಗೌಡ ಮನವಿ ಮಾಡಿದ್ದರು. ಜೊತೆಗೆ ನಾಗರಾಜು, ಲಕ್ಷ್ಮಣ್ ಕೂಡ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿದೆ.

ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಟ್ರಯಲ್ ಶುರುವಾಗಿದ್ದು, ರೇಣುಕಾಸ್ವಾಮಿ ತಂದೆ-ತಾಯಿಯ ಸಾಕ್ಷ್ಯ ದಾಖಲಿಸಲಾಗುತ್ತಿದೆ. ಈ ಹೊತ್ತಲ್ಲೇ ಪ್ರಾಸಿಕ್ಯೂಷನ್ ವಿರುದ್ಧವೇ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ ನೀಡಿದ್ದಾರೆ. ಹಿಂದಿನ ಹೇಳಿಕೆಗೂ, ಈಗಿನ ಹೇಳಿಕೆಗೂ ದ್ವಂದ್ವ ಹಿನ್ನೆಲೆ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷ್ಯವಾಗಿ ಪರಿಗಣಿಸಲು ಎಸ್‌ಪಿಪಿ ಮನವಿ ಮಾಡಿದ್ದಾರೆ.

error: Content is protected !!