ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಚಾರಣ ತಾಣ ಕುಮಾರಪರ್ವತ ಚಾರಣ ಶುಕ್ರವಾರದಿಂದ ಆರಂಭಗೊಂಡಿದ್ದು, ಕಳೆದ ವರ್ಷದ ನಿಯಮಾವಳಿಗಳಂತೆ ಚಾರಣಕೈಗೊಳ್ಳಬಹುದಾಗಿದೆ.
ಕುಮಾರ ಪರ್ವತ ಚಾರಣ ಕಳೆದ ಬೇಸಿಗೆ ಆರಂಭದಲ್ಲಿ ತಾತ್ಕಾಲಿಕ ಸ್ಥಗಿತಮಾಡಲಾಗಿದ್ದು ಇದೀಗ ಈ ವರ್ಷದ ಚಾರಣ ಶುಕ್ರವಾರದಿಂದ ಆರಂಭಗೊಂಡಿದೆ. ಅದರಂತೆ ಮೊದಲ ದಿನ ಸುಮಾರು 20 ರಷ್ಟು ಚಾರಣಿಗರು ಕುಮಾರಪರ್ವತ ಚಾರಣ ಕೈಗೊಂಡರು.
ಸುಬ್ರಹ್ಮಣ್ಯದ ದೇವರಗದ್ದೆ ಮೂಲಕ ಚಾರಣ ಆರಂಭಿಸಿದ ಚಾರಣಿಗರಿಗೆ ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ಹೂಗುಚ್ಚ ನೀಡಿ ಶುಭಾಶಯ ಕೋರಲಾಯಿತು. ಚಾರಣದ ಸಮಯದಲ್ಲಿ ಜಾಗೃತೆಯಿಂದ ಚಾರಣ ಮಾಡಿ ಪ್ಲಾಸ್ಟಿಕ್ ಮುಕ್ತ ಕುಮಾರ ಪರ್ವತಕ್ಕೆ ಸಹಕರಿಸುವಂತೆ ಅಧಿಕಾರಿಗಳು, ಸಿಬ್ಬಂದಿಗಳು ಮಾರ್ಗದರ್ಶನ ನೀಡಿದರು.

ಕುಮಾರಪರ್ವತ ಚಾರಣ ಕೈಗೊಳ್ಳಲು ಅರಣ್ಯ ವಿಹಾರ ಅರಣ್ಯ ಇಲಾಖೆಯ ವೆಬ್ಸೈಟ್ ಮೂಲಕ ನೋಂದಾಣಿ ಮಾಡಿ ಚಾರಣ ಕೈಗೊಳ್ಳಬೇಕಾಗಿದ್ದು, ನಿಗದಿತ ಮಿತಿ ಹಾಗೂ ಮಾರ್ಗಸೂಚಿಗಳ ಅನ್ವಯ ಪರಿಸರ ಸ್ನೇಹಿ ಚಾರಣ ಕೈಗೊಳ್ಳಲು ಅವಕಾಶ ನೀಡಲಾಗಿದೆ.
ಈ ವರ್ಷ ಎಂದಿಗಿಂತ 10 ದಿನ ಮೊದಲು ಚಾರಣ ಆರಂಭಗೊಂಡಿದೆ.