ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಎಂಆರ್‌ಸಿಎಲ್ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದು, ಮುಂದಿನ ವಾರದಿಂದಲೇ ನಾಲ್ಕನೇ ರೈಲು ಟ್ರ‍್ಯಾಕಿಗಿಳಿಯಲಿದೆ.
ಹೌದು, ನಮ್ಮ ಮೆಟ್ರೋದ ಯೆಲ್ಲೋ ಲೈನ್‌ನಲ್ಲಿ ಪ್ರಸ್ತುತ ಕೇವಲ ಮೂರು ರೈಲುಗಳು ಮಾತ್ರ ಸಂಚರಿಸುತ್ತಿವೆ. ಈ ಹಿನ್ನೆಲೆ ಪ್ರಯಾಣಿಕರು ಒಂದು ಮೆಟ್ರೋಗಾಗಿ 25 ನಿಮಿಷ ಕಾಯಬೇಕಿದೆ.
ಸದ್ಯ ಬಿಎಂಆರ್‌ಸಿಎಲ್ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈಗಾಗಲೇ ನಾಲ್ಕನೇ ರೈಲು ಬೆಂಗಳೂರಿಗೆ ಆಗಮಿಸಿದ್ದು, ಸೆಪ್ಟೆಂಬರ್ ಎರಡನೇ ವಾರದಲ್ಲಿಯೇ ಟ್ರ‍್ಯಾಕಿಗಿಳಿದು ಕಾರ್ಯಾರಂಭಿಸಲಿದೆ. ಈ ಮೂಲಕ ಪ್ರತಿ 15 ರಿಂದ 20 ನಿಮಿಷಕ್ಕೊಂದು ರೈಲು ಸಂಚಾರ ಮಾಡಲಿವೆ.