ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಿಯಾಗಿ ತರಬೇತಿ ಕೊಡದೇ ಸರ್ಕಾರ ಸಮೀಕ್ಷೆಯನ್ನ ಗೊಂದಲ ಮಾಡಿದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ದೊಡ್ಡ ಗೊಂದಲ ಆಗಿದೆ. ಸಮೀಕ್ಷೆಯ ಆಪ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಟ್ಯಾಲೆಂಟ್ ಇರೋ ಪ್ರತಿಭಾವಂತರು ಇದ್ದಾರೆ. ಆದರೂ ಸರ್ಕಾರ ಸರಿಯಾಗಿ ಆಪ್ ಮಾಡಿಲ್ಲ. ಸರ್ಕಾರದವರು 1.43 ಕೋಟಿ ಮನೆ ಸರ್ವೆ ಅಂತಿದ್ದಾರೆ. ಈವರೆಗೂ ಸಮೀಕ್ಷೆಯವರು ಎಷ್ಟು ಮನೆಗೆ ತಲುಪಿದ್ದಾರೆ? 15 ದಿನಗಳಲ್ಲಿ ಸಮೀಕ್ಷೆ ಮಾಡಿ ವರದಿ ಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.