ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹಾಲು ಕುಡಿಯಬೇಕಾದ ಎಳೆ ವಯಸ್ಸಿನ ಮೊಮ್ಮಗನಿಗೆ ಅಜ್ಜನೊಬ್ಬ ಸಾರಾಯಿ ಕುಡಿಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ಇದು ಹೇಗೆ ಸರಿ? ಈತನ ತಂದೆ ತಾಯಿ ಎಲ್ಲಿ ಎಂದು ಗರಂ ಆಗಿದ್ದಾರೆ.
ಬಾರ್‌ನಲ್ಲಿ ಮೊಮ್ಮಗನಿಗೆ ಅಜ್ಜ ಪೆಗ್ ಹಾಕಿಕೊಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿದ ಬಾರ್‌ನಲ್ಲಿದೆ. ಬಾರ್‌ನಲ್ಲಿದ್ದವರು ಮಗುವಿಗೆ ಕುಡಿಸೋದು ಬೇಡ ಬೇಡ ಎಂದರೂ ಕೇಳದೆ ಅಜ್ಜನೇ ಮೊಮ್ಮಗನಿಗೆ ಮದ್ಯ ಕುಡಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

