Wednesday, September 24, 2025

400 ವರ್ಷ ಹಳೆಯ ಮಸೀದಿಯ ತೆರವಿಗೆ ಅನುಮತಿ ನೀಡಿದ ಗುಜರಾತ್ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ನ 400 ವರ್ಷ ಹಳೆಯ ಮಸೀದಿಯ ಒಂದು ಭಾಗವನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸುವ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಕ್ರಮಕ್ಕೆ ಗುಜರಾತ್ ಹೈಕೋರ್ಟ್ ಅನುಮತಿ ನೀಡಿದ್ದು, ತೆರವು ಪ್ರಕ್ರಿಯೆ ವಿರೋಧಿಸಿ ಮಸೀದಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಅಹ್ಮದಾಬಾದ್ ನ ಸರಸ್ಪುರದಲ್ಲಿರುವ 400 ವರ್ಷ ಹಳೆಯ ಮಂಚ್ ಮಸೀದಿಯ ಒಂದು ಭಾಗವನ್ನು ಶಾಂತಿಯುತವಾಗಿ ಖಾಲಿ ಮಾಡಿ ಪಟ್ಟಣ ಯೋಜನಾ ಯೋಜನೆಯಡಿ ರಸ್ತೆ ಅಗಲೀಕರಣ ಯೋಜನೆಗಾಗಿ ಮಸೀದಿ ಆವರಣದ ಒಂದು ಭಾಗವನ್ನು ಎಎಂಸಿಗೆ ಹಿಂದಿರುಗಿಸುವಂತೆ ನೊಟೀಸ್ ನಲ್ಲಿ ಟ್ರಸ್ಟ್‌ಗೆ ಸೂಚಿಸಲಾಗಿತ್ತು.

ಜುಲೈ 25 ರ ಎಎಂಸಿ ನೊಟೀಸ್ ಗೆ ನಾಲ್ಕು ವಾರಗಳ ತಡೆಯಾಜ್ಞೆ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ನ್ಯಾಯಮೂರ್ತಿ ಮೌನಾ ಭಟ್ ಅವರ ಮೌಖಿಕ ಆದೇಶವು, ಎಎಂಸಿ ನೊಟೀಸ್ ಸ್ ಅನ್ನು ಪ್ರಶ್ನಿಸಿ ಮಸೀದಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಎಎಂಸಿ ಆರಂಭಿಸಿದ ಕ್ರಮವು ಗುಜರಾತ್ ಪ್ರಾಂತೀಯ ಮುನ್ಸಿಪಲ್ ಕಾರ್ಪೊರೇಷನ್ (ಜಿಪಿಎಂಸಿ) ಕಾಯ್ದೆ, 1949 ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂಬ ಆಧಾರದ ಮೇಲೆ ವಜಾಗೊಳಿಸಿದೆ.

ಇದನ್ನೂ ಓದಿ