Saturday, September 6, 2025

ಪ್ರತಾಪ್ ಸಿಂಹ ಕೋರ್ಟ್ ಹೋಗಿದ್ದು ಸಂತೋಷ, ನಾವು ಕೂಡ ಹೋರಾಟ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್​ಗೆ ಆಹ್ವಾನ ನೀಡಿದ ವಿಚಾರಕ್ಕೆ ಸಂಬಂಧಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಸಿಎಂ ಸಿದ್ದರಾಮಯ್ಯ ಮಾತಾಡಿದ್ದು, ಪ್ರತಾಪ್ ಸಿಂಹ ಹೋಗಿದ್ದು ಸಂತೋಷ. ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂಬುದಾಗಿ ಹೇಳಿದರು.

ಈ ಹಿಂದೆ ನಿಸಾರ್ ಅಹ್ಮದ್ ಮಾಡಿದಾಗ ಅವ್ರು ಏಕೆ ಕೋರ್ಟ್​ಗೆ ಹೋಗಲಿಲ್ಲ. ಟಿಪ್ಪು ಸುಲ್ತಾನ್​ ಮಾಡಿದ್ರಲ್ಲ ಆಗ ಯಾಕೆ ಏನು ಮಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ರು.

ಪ್ರತಾಪ್ ಸಿಂಹ ಕೋರ್ಟ್​ಗೆ ಹೋಗಲಿ, ನಾವು ಕೂಡ ಕಾನೂನು ಹೋರಾಟ ಮಾಡ್ತೇವೆ. ಅವ್ರು ಇದರಲ್ಲಿ ರಾಜಕೀಯ ಹೋರಾಟ ಮಾಡಿದ್ರೆ, ಎಲ್ಲದಕ್ಕೂ ನಾವು ಉತ್ತರ ನೀಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಾನು ಮುಸ್ತಾಕ್ ಬರೆದ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಬಂದಿದೆ. ಅನುವಾದ ಮಾಡಿರೋದು ಅವರ ಪುಸ್ತಕ ಅಲ್ಲವೇ? ಬಾನು ಮುಸ್ತಾಕ್ ಕನ್ನಡಾಂಬೆಗೆ, ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಸಿದಂತೆ ಖಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅವಮಾನ ಮಾಡಿದಕ್ಕೆ ಏನ್ ಪ್ರೂಫ್​ ಇದೆ ತೋರಿಸಿದೆ ಎಂದು ಕೇಳಿದ್ದಾರೆ.

ಇದನ್ನೂ ಓದಿ