ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲೇಜು ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್ ಮತ್ತು ಕಿರುಕುಳದ ನಂತರ ಹೈದರಾಬಾದ್‌ನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೈದರಾಬಾದ್‌ನ ಸಿದ್ಧಾರ್ಥ್ ಎಂಜಿನಿಯರಿಂಗ್ ಕಾಲೇಜಿನ 22 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಜಾದವ್ ಸಾಯಿ ತೇಜ ತನ್ನ ಹಾಸ್ಟೆಲ್ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿ ಆತಂಕ ವ್ಯಕ್ತಪಡಿಸಿದ್ದು, ತನ್ನನ್ನು ಹೊಡೆದು ಹಣ ವಸೂಲಿ ಮಾಡಲಾಗುತ್ತಿದೆ, ಡ್ರಿಂಕ್ಸ್ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಕೊನೆಯ ವಿಡಿಯೋದಲ್ಲಿ ಹಂಚಿಕೊಂಡಿದ್ದಾನೆ.
ಸಾಯಿ ತೇಜ ರ‍್ಯಾಗಿಂಗ್‌ಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರ‍್ಯಾಗಿಂಗ್ ಮತ್ತು ಆತ್ಮಹತ್ಯೆ ಎರಡು ಪ್ರಕರಣಗಳ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಸಾಯಿ ತೇಜನನ್ನ ಬಾರ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಕಾಲೇಜು ಹಿರಿಯ ವಿದ್ಯಾರ್ಥಿಗಳು ಮದ್ಯ ಸೇವಿಸಿ ಸುಮಾರು 10,000 ರೂ. ಬಿಲ್ ಪಾವತಿಸುವಂತೆ ಒತ್ತಾಯಿಸಲಾಯಿತು. ಒತ್ತಡ ನಿಭಾಯಿಸಲು ಸಾಧ್ಯವಾಗದೆ, ಸಾಯಿ ತೇಜ ಆತ್ಮಹತ್ಯೆಗೆ ಶರಣಾಗಿದ್ದಾನೆ.