ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಹರಿಯಾಣ ಜನಪ್ರಿಯ ನಟ-ನಿರ್ದೇಶಕ ಉತ್ತರ್ ಕುಮಾರ್ ಅವರನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಆದರೆ, ಬಂಧನದ ನಂತರ ಆರೋಗ್ಯ ಸಮಸ್ಯೆಯಿಂದ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರಿಂದ ಆರೋಗ್ಯದ ಬಗ್ಗೆ ಮಾಹಿತಿ ಬಂದ ನಂತರ ಮತ್ತೆ ಬಂಧನಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಕಿಯ ದೂರಿನ ಪ್ರಕಾರ, 2020ರಿಂದ 2023ರವರೆಗೆ ಉತ್ತರ್ ಕುಮಾರ್ ಚಿತ್ರರಂಗದಲ್ಲಿ ಪಾತ್ರಗಳನ್ನು ನೀಡುವ ಮತ್ತು ಮದುವೆಯಾಗುವ ಭರವಸೆ ನೀಡಿ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಗಾಜಿಯಾಬಾದ್‌ನ ಕಚೇರಿ ಮತ್ತು ಅಮ್ರೋಹಾದ ಫಾರ್ಮ್‌ಹೌಸ್‌ನಲ್ಲಿ ಆಕೆಯನ್ನು ಮದ್ಯ ಕುಡಿಯಲು ಒತ್ತಾಯಿಸಿ, ಚಿತ್ರನಿರ್ಮಾಪಕರನ್ನು ಭೇಟಿಯಾಗುವಂತೆ ಒತ್ತಡ ಹೇರಿದ್ದಾರೆ. ಆಕೆ ನಿರಾಕರಿಸಿದಾಗ, ಮದುವೆಯ ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜುಲೈ 18 ರಂದು ದಾಖಲಾದ FIRನಲ್ಲಿ ದೌರ್ಜನ್ಯ, ಜಾತಿ ನಿಂದನೆ, ಮತ್ತು ಧಮ್ಕಿಯ ಆರೋಪಗಳಿವೆ. SC/ST ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ.
DCP ನಿಮಿಷ್ ಪಾಟೀಲ್, ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಗ್ಯ ಸರಿಯಾದ ನಂತರ ಬಂಧನ ಮಾಡಲಾಗುವುದು ಎಂದಿದ್ದಾರೆ.
ಗಾಜಿಯಾಬಾದ್‌ನ ಕುಮಾರ್, 2004ರಲ್ಲಿ ‘ಧಾಕಡ್ ಚೋರಾ’ ಚಿತ್ರದಿಂದ ಖ್ಯಾತರಾದರು. 20 ವರ್ಷಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ‘ಕುನ್ವರ್ ಸಹಾಬ್’, ‘ಚಾಚಾ ಭಟಿಜಾ’ನಂತಹ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.