Tuesday, September 23, 2025

ನಾವೆಲ್ಲ ಚಿನ್ನ ತಗೋಳೊಕಿದ್ಯಾ? ಗ್ರಾಂಗೆ 11,400 ರೂ ದಾಟಿದ ಬಂಗಾರ: ಇವತ್ತಿನ ದರಪಟ್ಟಿ ಹೀಗಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆಯನ್ನು ಕಂಡಿವೆ. ಭಾರತೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಮೈಲಿಗಲ್ಲು ಮುಟ್ಟಿದ್ದು, ಹೂಡಿಕೆದಾರರ ಗಮನ ಸೆಳೆದಿವೆ. ಈ ಬೆಲೆ ಏರಿಕೆ, ವಿಶ್ವದ ಆರ್ಥಿಕ ಪರಿಸ್ಥಿತಿಗಳ ಪ್ರಭಾವ ಮತ್ತು ಬೇಡಿಕೆ ಹೆಚ್ಚಳದಿಂದ ಸಂಭವಿಸಿದೆ. ಭಾರತೀಯ ಹೂಡಿಕೆದಾರರು, ಸಿಕ್ಕಾಪಟ್ಟೆ ಚಿನ್ನ ಮತ್ತು ಬೆಳ್ಳಿ ಖರೀದಿಸುವಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ.

ಭಾರತದಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 1,04,800 ರೂವರೆಗೆ ಏರಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,14,330 ರೂಗೆ ಮುಟ್ಟಿದೆ. 18 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 85,770 ರೂ ಆಗಿದೆ. ಈ ಏರಿಕೆ ಹಿಂದಿನ ದಾಖಲೆಗಳನ್ನು ಮೀರಿಸಿದೆ.

ಬೆಳ್ಳಿ ಬೆಲೆ
ಬೆಳ್ಳಿ ಬೆಲೆಗಳು ಕೂಡ ದಾಖಲೆ ಏರಿಕೆಯನ್ನು ಕಂಡಿವೆ. 100 ಗ್ರಾಂ ಬೆಳ್ಳಿ ಬೆಲೆ 13,900 ರೂವಾಗಿದೆ. ಬೆಳ್ಳಿಯ ಬೆಲೆ ಚೆನ್ನೈ, ಕೇರಳ ಮೊದಲಾದ ಕೆಲ ರಾಜ್ಯಗಳಲ್ಲಿ 14,900 ರೂ ತಲುಪಿದೆ. ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿ 13,900 ರೂಕ್ಕೆ ಲಭ್ಯವಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಕೂಡ ಭಾರೀ ಏರಿಕೆ ಕಂಡಿದೆ. ಮಲೇಷ್ಯಾ, ದುಬೈ, ಅಮೆರಿಕ, ಸಿಂಗಾಪುರ್, ಕತಾರ್, ಸೌದಿ ಅರೇಬಿಯಾ ಮೊದಲಾದ ದೇಶಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 1,00,000 – 1,03,300 ರೂಗಳ ಮದ್ಯದಲ್ಲಿದೆ. ಹೀಗಾಗಿ, ಚಿನ್ನದ ಹೂಡಿಕೆ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ