Wednesday, September 3, 2025

FOOD | ಇನ್​ಸ್ಟಂಟ್ ಚುರುಮುರಿ ದೋಸೆ ತಿಂದಿದ್ದೀರಾ? ಫಟಾಫಟ್ ಅಂತ ರೆಡಿ ಆಗುತ್ತೆ… ಒಮ್ಮೆ ಟ್ರೈ ಮಾಡಿ

ದಕ್ಷಿಣ ಭಾರತದ ಆಹಾರ ಸಂಸ್ಕೃತಿಯಲ್ಲಿ ದೋಸೆ ಒಂದು ವಿಶಿಷ್ಟ ಸ್ಥಾನ ಹೊಂದಿದೆ. ಸಾಮಾನ್ಯವಾಗಿ ದೋಸೆಯನ್ನು ತಯಾರಿಸಲು ಅಕ್ಕಿ, ಉದ್ದಿನ ಬೇಳೆ, ಮೆಂತೆ ಕಾಳು ಮುಂತಾದವುಗಳನ್ನು ಗಂಟೆಗಳ ಕಾಲ ನೆನೆಸಿಡಬೇಕು, ನಂತರ ಹಿಟ್ಟು ರುಬ್ಬಿ ಹುಳಿ ಬರಲು ಬಿಡಬೇಕು. ಈ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಸಮಯದ ಅಭಾವದಲ್ಲಿ ರುಚಿಯಾದ ದೋಸೆ ತಿನ್ನಬೇಕೆಂದರೆ, ಸುಲಭವಾದ ವಿಧಾನವೆಂದರೆ ಚುರುಮುರಿ (ಮಂಡಕ್ಕಿ) ಬಳಸಿ ತಯಾರಿಸುವ ಇನ್‌ಸ್ಟಂಟ್ ದೋಸೆ. ಇದಕ್ಕೆ ಹೆಚ್ಚು ಸಮಯ ಬೇಡ, ಕೆಲವೇ ನಿಮಿಷಗಳಲ್ಲಿ ಹಿಟ್ಟೂ ಸಿದ್ಧ, ದೋಸೆಯೂ ಸಿದ್ಧ.

ಬೇಕಾಗುವ ಸಾಮಗ್ರಿಗಳು

ಚುರುಮುರಿ – 2 ಕಪ್
ಬಾಂಬೆ ರವೆ – 1 ಕಪ್
ಮೊಸರು – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಬೇಕಿಂಗ್ ಪೌಡರ್ – ಒಂದು ಚಿಟಿಕೆ

ತಯಾರಿಸುವ ವಿಧಾನ

ಚುರುಮುರಿಯನ್ನು ನೀರಿನಲ್ಲಿ ತೊಳೆದು 15 ನಿಮಿಷಗಳ ಕಾಲ ನೆನೆಸಿಡಿ. ಬೇರೆ ಬಟ್ಟಲಿನಲ್ಲಿ ರವೆ ಮತ್ತು ಮೊಸರು ಸೇರಿಸಿ ಮಿಶ್ರಣ ಮಾಡಿ, ಸ್ವಲ್ಪ ನೀರು ಸೇರಿಸಿ 15 ನಿಮಿಷ ನೆನೆಸಿಡಿ.

ನೆನೆಸಿದ ಚುರುಮುರಿ, ರವೆ ಮಿಶ್ರಣವನ್ನು ಮಿಕ್ಸರ್‌ನಲ್ಲಿ ಹಾಕಿ ನುಣ್ಣಗೆ ರುಬ್ಬಿ. ಹದಕ್ಕೆ ತಕ್ಕಷ್ಟು ನೀರು ಸೇರಿಸಿ ದೋಸೆ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಗೂ ಬೇಕಿಂಗ್ ಪೌಡರ್ ಸೇರಿಸಿ ಚೆನ್ನಾಗಿ ಕಲಸಿ.

ಬಿಸಿ ಮಾಡಿದ ದೋಸೆ ತವೆಯ ಮೇಲೆ ತೆಳುವಾಗಿ ಹರಡಿ, ಎರಡು ಬದಿಯೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ.

ಇದನ್ನೂ ಓದಿ