ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹಿಮಾಚಲ ಪ್ರದೇಶದಲ್ಲಿ ಭೂಕುಸಿತ, ಪ್ರವಾಹಗಳಿಂದ ಜನರು ತತ್ತರಿಸಿದ್ದಾರೆ. ಮೇಘಸ್ಫೋಟದ ಪರಿಣಾಮ ಗ್ರಾಮಗಳೇ ಕೊಚ್ಚಿ ಹೋಗುತ್ತಿದೆ.
ಇದರ ನಡುವೆ ಭಾರತೀಯ ಹವಾಮಾನ ಇಲಾಖೆ ,ಸೆಪ್ಟೆಂಬರ್ ತಿಂಗಳು ಮತ್ತಷ್ಟು ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡಿದೆ.
ಅದರಲ್ಲೂ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಂಜಾಬ್, ಹಿಮಾಚಲ ಪ್ರದೇಶ, ಹರ್ಯಾಣದ ಕೆಲ ಭಾಗ, ರಾಜಸ್ಥಾನ, ದಕ್ಷಿಣ ಉತ್ತರ ಪ್ರದೇಶ, ಆಗ್ನೇಯ ಮಧ್ಯಪ್ರದೇಶ ಹಾಗೂ ಒಡಿಶಾ ರಾಜ್ಯಗಳಿಗೆ ರೆಡ್ ಅಲರ್ಟ್ ನೀಡಿದೆ. ಜೊತೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿಭಾರೀ ಮಳೆಯಾಗಲಿದೆ. ಇದರ ಜೊತೆಗೆ ಸುತ್ತ ಮುತ್ತಲಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರ, ಉತ್ತರಖಂಡ, ಅಂಡಮಾನ್ ದ್ವೀಪ, ದೆಹಲಿಯಲ್ಲಿ ಭಾರಿ ಮಳೆಯಾಗಲಿದೆ ಎಂದ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಮೇಘಸ್ಫೋದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಪೂಂಚ್, ಮೀರ್ಪುರ್, ರಜೌರಿ, ರಿಯಾಸಿ, ಜಮ್ಮು, ರಂಬನ್, ಉದಮ್‌ಪುರ, ಸಾಂಬಾ, ಕಥುವಾ, ದೋಡಾ, ಕಿಶ್ತ್ವಾರ್ ಪ್ರದೇಶಗಳಲ್ಲಿ ಭಾರೀಮಳೆಯಾಗಲಿದೆ. ಪರ್ವತಶ್ರೇಣಿ ಪ್ರದೇಶಗಳಾಗಿರುವ ಕಾರಣ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.
ಪಂಜಾಬ್ನಲ್ಲಿ ಕಪುರ್ತಲಾ, ಜಲಂಧನರ್, ನವಾನ್‌ಶಾರ್, ರೂಪ್‌ನಗರ್, ಮೊಗಾ, ಲುಧಿಯಾನನ, ಬರ್ನಾಲಾ,ಸಂಗ್ರೂರು ಸೇರಿದಂತೆ ಕೆಲ ಪ್ರದೇಶಗಳು ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಿಮಾಚಲ ಪ್ರದೇಶದ ಮಂಡಿ, ಉನಾ, ಬಿಲಾಸಪುರ, ಸಿರ್ಮೌರ್, ಸೋಲನ್ ಭಾಗದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದೆ.