Wednesday, September 3, 2025

ಪಂಜಾಬ್​ ನಲ್ಲಿ ಭಾರೀ ಮಳೆ: ಸೆ.​ 7ರ ವರೆಗೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್​ ನಲ್ಲಿ ಭಾರೀ ಮಳೆಯಾಗುತ್ತಿದ್ದು, 0 ಜನರು ಸಾವನ್ನಪ್ಪಿದ್ದಾರೆ. 1988ರ ಬಳಿಕ ರಾಜ್ಯ ಈ ಮಟ್ಟಿಗಿನ ಮಳೆ ಪ್ರವಾಹ ಕಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪಟಿಯಾಲ ಮತ್ತು ರೂಪ್​ನಗರ್​​ ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರೆದಿದ್ದು, ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಸೆಪ್ಟಂಬರ್​ 7ರ ವರೆಗೆ ಬಂದ್​ ಮಾಡಲಾಗಿದೆ.

ನೀರಿನ ನಿರಂತರ ಹರಿವಿನಿಂದಾಗಿ ಬಾಕ್ರಾ ಅಣೆಕಟ್ಟೆ 1,677.84 ಅಡಿ ನೀರಿನ ಹರಿವು ದಾಖಲಾಗಿದೆ. ಒಳಹರಿವಿನ ಮಟ್ಟ 86,822 ಕ್ಯೂಸೆಕ್​ ಇದ್ದು, ಹೊರ ಹರಿವು 65,042 ಕ್ಯೂಸೆಕ್​​ ಇದೆ. ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಅಣೆಕಟ್ಟೆಗೆ ಹೆಚ್ಚಿನ ನೀರಿನ ಹರಿವು ಆಗುತ್ತಿದ್ದು, ನಂಗಲ್​ ಗ್ರಾಮ ಮುಳುಗಡೆ ಆಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ನದಿ ದಂಡೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಶ್ರೀ ಆನಂದಪುರ ಸಾಹಿಬ್ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಅಥವಾ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಲಾಗಿದೆ. ಅವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಪಂಜಾಬ್ ಸರ್ಕಾರವು ಅವರೊಂದಿಗೆ ದೃಢವಾಗಿ ನಿಲ್ಲುಲಿದೆ ಎಂದು ಪಂಜಾಬ್ ಕ್ಯಾಬಿನೆಟ್ ಸಚಿವ ಹರ್ಜೋತ್ ಬೈನ್ಸ್ ತಿಳಿಸಿದರು.

ಇದನ್ನೂ ಓದಿ