ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಐತಿಹಾಸಿಕ ಅರಮನೆ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟದ ಕುರಿತು ಪ್ರತ್ಯಕ್ಷದರ್ಶಿಯೊಬ್ಬ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ನಡೆದ ಸ್ಫೋಟದಿಂದ ತಾನು ಸಾವಿನ ಅಂಚಿನಿಂದ ಪಾರಾದೆನೆಂದು ಅವರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಗಿರೀಶ್ ಎಂಬವರು, ಸ್ಫೋಟ ನಡೆದ ಸ್ಥಳದಿಂದ ಐದು-ಆರು ಅಡಿ ದೂರದಲ್ಲೇ ನಿಂತಿದ್ದೆ. ಇನ್ನೂ ಎರಡು ಹೆಜ್ಜೆ ಮುಂದೆ ಇಟ್ಟಿದ್ದರೆ ನಾನು ಇಂದು ಜೀವಂತವಾಗಿರಲಿಲ್ಲ ಎಂದು ಹೇಳಿದ್ದಾರೆ. ಸ್ಫೋಟದ ವೇಳೆ ಬಾಂಬ್ ಸಿಡಿದಂತೆ ಭಾರೀ ಶಬ್ದದೊಂದಿಗೆ ಬೆಂಕಿಯ ಗುಂಡು ಎದ್ದಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಗಾಬರಿ ವಾತಾವರಣ ನಿರ್ಮಾಣವಾಗಿತ್ತು ಎಂದು ಅವರು ವಿವರಿಸಿದರು.
ಇದನ್ನೂ ಓದಿ:
ಸ್ಫೋಟದ ತೀವ್ರತೆಗೆ ಮಾಂಸದ ತುಂಡೊಂದು ತನ್ನ ಮುಂದೆ ಬಿದ್ದಿತು. ಬಟ್ಟೆಗಳಿಗೆ ರಕ್ತ ತಾಗಿತ್ತು. ಗಾಯಗೊಂಡ ಮಹಿಳೆಯೊಬ್ಬರು ಭಯದಿಂದ ನನ್ನ ಕೈ ಹಿಡಿದುಕೊಂಡರು. ನಾನು ಕೆಲ ಕ್ಷಣ ಅಚ್ಚರಿಯಿಂದ ಅಚಲವಾಗಿ ನಿಂತುಬಿಟ್ಟೆ ಎಂದು ಗಿರೀಶ್ ತಮ್ಮ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ.

